ADVERTISEMENT

ಶಿವಸೇನಾದ ಚಿಹ್ನೆಯನ್ನು ಯಾರೊಬ್ಬರೂ ಕಸಿಯಲಾಗದು: ಉದ್ಧವ್ ಠಾಕ್ರೆ

ಮೃತ್ಯುಂಜಯ ಬೋಸ್
Published 8 ಜುಲೈ 2022, 12:55 IST
Last Updated 8 ಜುಲೈ 2022, 12:55 IST
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ   

ಮುಂಬೈ: 'ಶಿವಸೇನಾ ಪಕ್ಷದ ಚುನಾವಣಾ ಚಿಹ್ನೆಯಾದ ಬಿಲ್ಲು–ಬಾಣದ ಗುರುತನ್ನು ಯಾರೊಬ್ಬರೂಕಸಿಯಲು ಅಥವಾ ಕದಿಯಲು ಸಾಧ್ಯವಿಲ್ಲ' ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಶಿವಸೇನಾ ಮುಖ್ಯಸ್ಥರೂ ಆಗಿರುವಉದ್ಧವ್‌, ಬಾಂದ್ರಾದಲ್ಲಿರುವ ತಮ್ಮ ನಿವಾಸ 'ಮಾತೋಶ್ರಿ'ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಮಹಾರಾಷ್ಟ್ರದ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಹಲವು ಶಾಸಕರು, ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿಯನ್ನೊಳಗೊಂಡ 'ಮಹಾ ವಿಕಾಸ ಆಘಾಡಿ' ಸರ್ಕಾರದ ವಿರುದ್ಧಬಂಡಾಯವೆದ್ದಿದ್ದರು. ಹೀಗಾಗಿ, ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.

ADVERTISEMENT

ಬಳಿಕ ಬಿಜೆಪಿ ಬೆಂಬಲದೊಂದಿಗೆ ಏಕನಾಥ ಶಿಂಧೆ ಸಿಎಂ ಆಗಿಜೂನ್‌ 30ರಂದು ಅಧಿಕಾರ ಸ್ವೀಕರಿಸಿದ್ದರು.

ಪಕ್ಷದ ಮೂಲ ಚಿಹ್ನೆಗಾಗಿ ಏಕನಾಥ ಶಿಂಧೆ ಬಣ ಬೇಡಿಕೆ ಇಡಲಿದೆ ಎಂಬ ಸುದ್ದಿ ಹರಿದಾಡಿದ್ದವು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದಉದ್ಧವ್‌,'ಈ ವಿಚಾರದ ಬಗ್ಗೆ ಈಗಾಗಲೇ ಕಾನೂನು ಸಲಹೆ ಪಡೆದುಕೊಂಡಿದ್ದೇನೆ. ಸ್ಪಷ್ಟವಾಗಿ ಹೇಳುತ್ತೇವೆ. ರಾಜಕೀಯ ಪಕ್ಷ ಮತ್ತು ಶಾಸಕಾಂಗ ಪಕ್ಷ, ಇವೆರಡೂ ಬೇರೆಬೇರೆಯೇ. 40 ಶಾಸಕರನ್ನು ಒಬ್ಬ ಶಾಸಕ ಬಿಟ್ಟುಹೋದರೂ, ಪಕ್ಷ ಮತ್ತು ಸಂಘಟನೆ ಉಳಿಯುತ್ತದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.