ನವದೆಹಲಿ: ಭಾರತೀಯ ಸಾಕುಪ್ರಾಣಿ ಹಿತರಕ್ಷಣಾ ಮಂಡಳಿ ಮಾರ್ಗಸೂಚಿಯಂತೆ ಸಾಕು ನಾಯಿ ದಾಳಿ ಮಾಡಿದರೆ ಮಾಲೀಕನಿಗೆ ₹10 ಸಾವಿರ ದಂಡ ವಿಧಿಸುವ ನಿರ್ಧಾರವನ್ನು ನೋಯ್ಡಾ ಪ್ರಾಧಿಕಾರ ತೆಗೆದುಕೊಂಡಿದೆ.
ಇತ್ತೀಚಿನ ಮಾರ್ಗಸೂಚಿಯಂತೆ ಮುಂದಿನ ವರ್ಷ ಜ.31ರ ಒಳಗೆ ಮಾಲೀಕರು ತಮ್ಮ ಸಾಕುಪ್ರಾಣಿ ನೋಂದಣಿಗೊಳಿಸುವುದನ್ನು ಪ್ರಾಧಿಕಾರ ಕಡ್ಡಾಯಗೊಳಿಸಿದೆ.
‘ನಾಯಿ/ಬೆಕ್ಕಿನಿಂದ ಯಾರಿಗಾದರೂ ಹಾನಿಯಾದರೆ, ಗಾಯಗೊಂಡ ವ್ಯಕ್ತಿ ಅಥವಾ ಪ್ರಾಣಿಯ ಚಿಕಿತ್ಸೆಯ ವೆಚ್ಚವನ್ನು ಸಾಕುಪ್ರಾಣಿಯ ಮಾಲೀಕರು ಭರಿಸಬೇಕು. ಜೊತೆಗೆ ಮಾ.1,2023ರಿಂದ ₹10 ಸಾವಿರ ದಂಡವನ್ನು ಪಾವತಿಸಬೇಕು’ ಎಂದು ಹೊಸ ನಿಯಮಕ್ಕೆ ಪ್ರಾಧಿಕಾರ ಅಂಗೀಕಾರ ನೀಡಿದೆ.
ನಾಯಿಗೆ ರೇಬಿಸ್ ಇಂಜಕ್ಷನ್ ಕಡ್ಡಾಯ. ಇಲ್ಲವಾದಲ್ಲಿ ಪ್ರತಿ ತಿಂಗಳು ₹2000 ದಂಡ ಪಾವತಿಸಬೇಕು. ಪ್ರಾಧಿಕಾರದ 207ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.