ADVERTISEMENT

ನೋಯ್ಡಾ | ಬಿಎಂಡಬ್ಲೂ ಕಾರು ಸ್ಕೂಟರ್‌ಗೆ ಡಿಕ್ಕಿ–ಬಾಲಕಿ ಸಾವು

ಪಿಟಿಐ
Published 27 ಜುಲೈ 2025, 14:28 IST
Last Updated 27 ಜುಲೈ 2025, 14:28 IST
   

ನೋಯ್ಡಾ: ವೇಗವಾಗಿ ಬಂದ ಬಿಎಂಡಬ್ಲೂ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 5 ವರ್ಷ ಬಾಲಕಿ ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿರುವ ಘಟನೆ ನೋಯ್ಡಾದ ಸೆಕ್ಟರ್ 20ರಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.

ಶನಿವಾರ ತಡರಾತ್ರಿ ಬಾಲಕಿಯು ತನ್ನ ತಂದೆ ಮತ್ತು ಚಿಕ್ಕಪ್ಪನೊಂದಿಗೆ ಮಕ್ಕಳ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಘಟನೆ ಸಂಭವಿಸಿದೆ. ಆಯಾತ್ ಮೃತ ಬಾಲಕಿ, ಮೊಹಮ್ಮದ್ ಮತ್ತು ರಾಜಾ ಗಾಯಗೊಂಡವರು.

ಘಟನೆ ಸಂಬಂಧ ಪೊಲೀಸರು ಯಶ್ ಶರ್ಮಾ (22) ಮತ್ತು ಅಭಿಷೇಕ್ ರಾವತ್ (22) ಎಂಬವರನ್ನು ಬಂಧಿಸಿದ್ದು, ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವು ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಆರೋಪಿಗಳು ಔತಣಕೂಟ ಮುಗಿಸಿ ಮರಳುತ್ತಿರುವಾಗ ಘಟನೆ ನಡೆದಿದ್ದು, ಅವರು ಮದ್ಯ ಸೇವಿಸಿದ್ದರೆ ಎಂದು ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.