ADVERTISEMENT

‘ಅನ್ಯಧರ್ಮೀಯ ಉದ್ಯೋಗಿಗಳಿಗೆ ಹಿಂದು ದೇಗುಲಗಳಲ್ಲಿ ಅವಕಾಶವಿಲ್ಲ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 18:25 IST
Last Updated 29 ಆಗಸ್ಟ್ 2019, 18:25 IST
TTD
TTD   

ಅಮರಾವತಿ: ಆಂಧ್ರಪ್ರದೇಶದ ಹಿಂದೂ ದೇಗುಲಗಳಲ್ಲಿ ಕಾರ್ಯನಿರ್ವಹಿಸುತ್ತಿರುವಅನ್ಯಧರ್ಮೀಯರು ಹಿಂದು ಧರ್ಮಕ್ಕೆ ಮತಾಂತರವಾಗಿದ್ದರೆ ಮಾತ್ರ ಉದ್ಯೋಗದಲ್ಲಿ ಮುಂದುವರಿಯಬಹುದು ಎಂದು ರಾಜ್ಯಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

‘ದೇಗುಲಗಳ ಆಡಳಿತ ಮಂಡಳಿಗಳಲ್ಲಿ ಅಥವಾ ದತ್ತಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ಹಿಂದು ಧರ್ಮ ಅನುಸರಿಸುತ್ತಿದ್ದಾರಾ ಎಂದು ಪರಿಶೀಲಿಸಲು, ಮನೆಗಳಿಗೆ ದಿಢೀರ್ ಭೇಟಿ ನೀಡಲಾಗುತ್ತದೆ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್‌.ವಿ. ಸುಬ್ರಮಣಿಯಮ್ ಎಚ್ಚರಿಕೆ ನೀಡಿದ್ದಾರೆ.

ದೇಗುಲಗಳಲ್ಲಿರುವ ಅನ್ಯಧರ್ಮೀಯರನ್ನು ಗುರುತಿಸಲು ಸಮನ್ವಯ ಸಮಿತಿ ರಚಿಸಲಾಗುವುದು ಎಂದು ಸಹ ಅವರು ಹೇಳಿದ್ದಾರೆ.

ADVERTISEMENT

ಸುಬ್ರಮಣಿಯಮ್ ಅವರು ಈಚೆಗೆ ತಿರುಮಲ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ, ಅಲ್ಲಿನ ಕೆಲವು ಭಕ್ತರು ಎಪಿಎಸ್ಆರ್‌ಟಿಸಿ ಟಿಕೆಟ್‌ಗಳ ಹಿಂಭಾಗದಲ್ಲಿ ‘ಜೆರುಸಲೆಂ ಯಾತ್ರೆ’ ಕುರಿತು ಜಾಹೀರಾತು ಇರುವ ಬಗ್ಗೆ ಅವರ ಬಳಿ ದೂರಿದ್ದರು. ಇವು ತಿರುಮಲಕ್ಕೆ ಭೇಟಿ ನೀಡುವ ಟಿಕೆಟ್‌ಗಳಲ್ಲದಿದ್ದರೂ, ದೇಗುಲ ನಗರಿಯಲ್ಲಿ ಕ್ರೈಸ್ತ ಧರ್ಮ ಬೋಧನೆ ಪ್ರಚಾರ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.