ADVERTISEMENT

ಮೋದಿ ಪ್ರಧಾನಿಯಾದ ನಂತರ ಒಂದಿಂಚು ಭೂಭಾಗವನ್ನೂ ಬಿಟ್ಟುಕೊಟ್ಟಿಲ್ಲ: ರಿಜಿಜು

ಪಿಟಿಐ
Published 5 ಏಪ್ರಿಲ್ 2022, 15:20 IST
Last Updated 5 ಏಪ್ರಿಲ್ 2022, 15:20 IST
ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದರು –ಪಿಟಿಐ ಚಿತ್ರ
ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಮಂಗಳವಾರ ಲೋಕಸಭೆಯಲ್ಲಿ ಹೇಳಿದರು.

ಉಕ್ರೇನ್‌ ವಿದ್ಯಮಾನಗಳ ಕುರಿತು ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ ‘ಭಾರತದ ಪ್ರದೇಶವನ್ನು ಸ್ವಲ್ಪ–ಸ್ವಲ್ಪವಾಗಿ ಚೀನಾಕ್ಕೆ ಬಿಟ್ಟು ಕೊಡಲಾಗುತ್ತಿದೆ’ ಎಂದು ಬಿಎಸ್‌ಪಿ ಸಂಸದ ಶ್ಯಾಮಸಿಂಗ್ ಯಾದವ್‌ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಸಚಿವ ರಿಜಿಜು, ‘ಕೆಲ ಪ್ರದೇಶಗಳು ಈಗಲೂ ಚೀನಾ ಹಾಗೂ ಪಾಕಿಸ್ತಾನದ ವಶದಲ್ಲಿವೆ. ಈ ಪ್ರದೇಶಗಳು ಅತಿಕ್ರಮಣಗೊಳ್ಳಲು ಕಾರಣರಾದವರ ಹೆಸರುಗಳನ್ನು ಪ್ರಸ್ತಾಪಿಸುವುದಿಲ್ಲ. ಆದರೆ, ಮೋದಿ ಅವರು ಪ್ರಧಾನಿಯಾದ ನಂತರ ಒಂದು ಇಂಚೂ ಪ್ರದೇಶವನ್ನು ಸಹ ಬಿಟ್ಟುಕೊಟ್ಟಿಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

ಚೀನಾ ಗಡಿಗೆ ಹೊಂದಿಕೊಂಡಿರುವ ಅರುಣಾಚಲಪ್ರದೇಶ ಶೇ 100ರಷ್ಟು ಸುರಕ್ಷಿತ ಹಾಗೂ ಭದ್ರವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.