ADVERTISEMENT

ಸೋರೇಕಾಯಿ, ಹೀರೇಕಾಯಿಗೆ ಲೇವಡಿ: ಮೆಕ್‌ಡೊನಾಲ್ಡ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 20:00 IST
Last Updated 22 ನವೆಂಬರ್ 2019, 20:00 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ‘ಬೇಜವಾಬ್ದಾರಿಯುತ ಜಾಹೀರಾತು’ ಪ್ರಸಾರ ಮಾಡಿದ್ದಕ್ಕಾಗಿ ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರವು ಮೆಕ್‌ಡೊನಾಲ್ಡ್‌ ಸಂಸ್ಥೆಗೆ ಈಚೆಗೆ ನೋಟಿಸ್‌ ಜಾರಿಮಾಡಿದೆ.

ತಮ್ಮ ಸಂಸ್ಥೆ ತಯಾರಿಸುವ ಬರ್ಗರ್‌ನತ್ತ ಯುವ ಸಮೂಹವನ್ನು ಆಕರ್ಷಿಸಲು, ‘ಸೋರೆಕಾಯಿ ಹಾಗೂ ಹೀರೇಕಾಯಿಗಳ ಮಧ್ಯೆ ಪುನಃ ಸಿಲುಕಿಕೊಂಡಿರುವಿರಾ? ನಮ್ಮ 1+1 ಕಾಂಬೊ ನಿಮ್ಮದಾಗಿಸಿಕೊಳ್ಳಿ’ ಎಂದು ಕೆಲವು ಪತ್ರಿಕೆಗಳಲ್ಲಿ ಇಡೀಪುಟದ ಜಾಹೀರಾತು ನೀಡಿತ್ತು. ಬರ್ಗರ್‌ ಜೊತೆಗೆ ಕೋಕ ಕೋಲ ನೀಡುತ್ತಿದ್ದೇವೆ ಎಂದು ಹೇಳಲು ಕಂಪನಿ ಈ ಪ್ರಚಾರ ಮಾರ್ಗವನ್ನು ಹಿಡಿದಿತ್ತು.

ಈ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರಾಧಿಕಾರವು, ನೋಟಿಸ್‌ ಜಾರಿಗೊಳಿಸಿ 10 ದಿನಗಳೊಳಗೆ ಉತ್ತರಿಸಲು ಸೂಚಿಸಿದೆ.

ADVERTISEMENT

‘ಆಹಾರ ಮಾರಾಟ ಮಾಡುವ ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ –2006’ರ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಆರೋಗ್ಯಕ್ಕೆ ಪೂರಕವಾದ ತಾಜಾ ಆಹಾರ ಮತ್ತು ತರಕಾರಿಗಳನ್ನು ಅಪಮಾನಿಸುವ ಪ್ರವೃತ್ತಿಯನ್ನು ಆಹಾರ ತಯಾರಿಕಾ ಕಂಪನಿಗಳು ಬೆಳೆಸಿಕೊಂಡಿವೆ. ಆರೋಗ್ಯಕರ ಆಹಾರ ಸೇವಿಸಲು ಪ್ರೇರಣೆ ನೀಡುವ ರಾಷ್ಟ್ರದ ನೀತಿಗೆ ಇಂಥ ಜಾಹೀರಾತುಗಳು ವಿರುದ್ಧವಾಗಿವೆ’ ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.