ADVERTISEMENT

ಕೋವಿಡ್‌: ಆಸ್ಟ್ರೇಲಿಯಾ ವಿಜ್ಞಾನಿಗಳಿಂದ ಎರಡು ಔಷಧ ಅಭಿವೃದ್ದಿ

ಪಿಟಿಐ
Published 26 ಮೇ 2021, 12:13 IST
Last Updated 26 ಮೇ 2021, 12:13 IST
ಕೊರೊನಾ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೊರೊನಾ ಸೋಂಕು ಪರೀಕ್ಷೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಕೋವಿಡ್‌–19 ಅನ್ನು ತಡೆಗಟ್ಟಲು ಆಸ್ಟ್ರೇಲಿಯಾದ ವಿಜ್ಞಾನಿಗಳು ಎರಡು ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸೋಂಕಿಗೆ ಒಳಪಟ್ಟವರಿಗೆ ರೋಗ ತೀವ್ರವಾಗಿ ಬಾಧಿಸದಂತೆ ಈ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಸ್ಟ್ರೇಲಿಯಾದ ಕ್ಯೂಐಎಂಆರ್ ಬರ್ಘೋಫರ್ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ ಅಮೈನೊ ಆಮ್ಲ ಸರಪಣಿ ಆಧಾರಿತ (ಪೆಪ್ಟೈಡ್‌) ಔಷಧಿಗಳು ಫ್ರಾನ್ಸ್‌ನ ಐಡಿಎಂಐಟಿ ಪ್ರಯೋಗಾಲಯದಲ್ಲಿ ‘ಹ್ಯಾಮ್‌ಸ್ಟರ್‌’ಗಳ (ಇಲಿಗಳ ರೀತಿಯ ಸಾಕು ಪ್ರಾಣಿ) ಮೇಲೆ ಪರೀಕ್ಷಿಸಲಾಗುತ್ತಿದೆ.

‘ಈ ಔಷಧಗಳು ವಿಷಕಾರಿಯಲ್ಲ, ಆದರೆ ಕೆಲ ಅಡ್ಡ ಪರಿಣಾಮಗಳನ್ನು ಹೊಂದಿವೆ’ ಎಂಬುದು ಔಷಧಿಗಳ ಪ್ರಾರಂಭಿಕ ಫಲಿತಾಂಶದಲ್ಲಿ ಗೊತ್ತಾಗಿದೆ. ಈ ಕುರಿತು ‘ನೇಚರ್ ಸೆಲ್ ಡಿಸ್ಕವರಿ’ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ADVERTISEMENT

‘ಔಷಧಗಳನ್ನು ಕೊಠಡಿಯ ಉಷ್ಣಾಂಶದಲ್ಲಿ ಸಂಗ್ರಹಿಸಬಹುದು. ಇದರಿಂದ ವಿತರಣೆಯೂ ಸುಲಭವಾಗುತ್ತದೆ’ ಎಂದು ಸಂಶೋಧಕರು ಹೇಳಿದ್ದಾರೆ.

‘ಪೆಪ್ಟೈಡ್ ಆಧಾರಿತ ಮೊದಲ ಔಷಧಿಯು ಲಸಿಕೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ನೆರವಾಗುತ್ತದೆ. ಎರಡನೇ ಔಷಧಿಯು ಸೋಂಕಿತರ ಕೋಶಗಳಲ್ಲಿ ವೈರಾಣು ಹರಡುವುದನ್ನು ನಿಲ್ಲಿಸುತ್ತದೆ’ ಎಂದು ಹಿರಿಯ ಸಂಶೋಧಕಿ ಸುಧಾ ರಾವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.