ADVERTISEMENT

ಅಫ್ಗಾನಿಸ್ತಾನ ಬಿಕ್ಕಟ್ಟಿನಿಂದ ನೆರೆ ಹೊರೆಯ ರಾಷ್ಟ್ರಗಳ ಮೇಲೂ ಪರಿಣಾಮ: ದೋಭಾಲ್‌

ಎಂಟು ರಾಷ್ಟ್ರಗಳ ಪ್ರಾದೇಶಿಕ ಭದ್ರತಾ ಸಭೆ

ಪಿಟಿಐ
Published 10 ನವೆಂಬರ್ 2021, 7:17 IST
Last Updated 10 ನವೆಂಬರ್ 2021, 7:17 IST
ಅಜಿತ್ ದೋವಲ್
ಅಜಿತ್ ದೋವಲ್   

ನವದೆಹಲಿ: ಅಫ್ಗಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆ ದೇಶದ ಜನರ ಮೇಲೆ ಅಷ್ಟೇ ಅಲ್ಲದೇ ನೆರೆಹೊರೆಯ ರಾಷ್ಟ್ರಗಳು ಮತ್ತು ವಲಯಗಳ ಮೇಲೂ ಪರಿಣಾಮವನ್ನು ಉಂಟು ಮಾಡುತ್ತಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋಭಾಲ್‌ ಹೇಳಿದ್ದಾರೆ.

ಅಫ್ಗನ್ ಬಿಕ್ಕಟ್ಟು ಕುರಿತು ಬುಧವಾರ ಇಲ್ಲಿ ಆಯೋಜಿಸಿದ್ದ ಎಂಟು ರಾಷ್ಟ್ರಗಳ 'ಪ್ರಾದೇಶಿಕ ಭದ್ರತಾ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ’ಅಫ್ಗಾನ್‌ ಪರಿಸ್ಥಿತಿಯ ಕುರಿತು ಪ್ರಾದೇಶಿಕ ರಾಷ್ಟ್ರಗಳ ನಡುವೆ ನಿಕಟ ಸಮಾಲೋಚನೆ, ಹೆಚ್ಚಿನ ಸಹಕಾರ ಮತ್ತು ಸಮನ್ವಯ ಹೊಂದಲು ಇದು ಸೂಕ್ತ ಸಮಯ’ ಎಂದು ಹೇಳಿದರು.

ಈ ಸಂವಾದದಲ್ಲಿರಷ್ಯಾ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಭದ್ರತಾ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.

ADVERTISEMENT

ಅಫ್ಗಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ಹೆಚ್ಚುತ್ತಿರುವ ಭಯೋತ್ಪಾದನೆ, ತೀವ್ರವಾದ ಮತ್ತು ಮಾದಕ ವಸ್ತು ಕಳ್ಳಸಾಗಣೆಯಂತಹ ಬೆದರಿಕೆಗಳನ್ನು ಎದುರಿಸಲು ನೆರೆಯ ರಾಷ್ಟ್ರಗಳ ನಡುವೆ ಸಹಕಾರ ಏರ್ಪಡಿಸಬೇಕೆಂಬ ಉದ್ದೇಶದೊಂದಿಗೆ ಭಾರತ ಈ ಸಂವಾದವನ್ನು ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.