ADVERTISEMENT

ಕೋವಿಡ್‌: ಪರಮಾಣು ವಿಜ್ಞಾನಿ ಶೇಖರ್‌ ಬಸು ನಿಧನ

ಪಿಟಿಐ
Published 24 ಸೆಪ್ಟೆಂಬರ್ 2020, 8:14 IST
Last Updated 24 ಸೆಪ್ಟೆಂಬರ್ 2020, 8:14 IST
ಶೇಖರ್ ಬಸು (ಕೃಪೆ: ಫೇಸ್‌ಬುಕ್)
ಶೇಖರ್ ಬಸು (ಕೃಪೆ: ಫೇಸ್‌ಬುಕ್)   

ಕೋಲ್ಕತ್ತ: ದೇಶದ ಹಿರಿಯ ಪರಮಾಣ ವಿಜ್ಞಾನಿ ಮತ್ತು ಪರಮಾಣ ಇಂಧನ ಆಯೋಗದ ಮಾಜಿ ಅಧ್ಯಕ್ಷ ಡಾ. ಶೇಖರ್‌ ಬಸು (68) ಅವರು ಗುರುವಾರ ನಿಧನರಾದರು. ಅವರಿಗೆ ಕೋವಿಡ್‌–19 ದೃಢಪಟ್ಟಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಜತೆಗೆ ಅವರು ಮೂತ್ರಪಿಂಡ ವೈಫಲ್ಯದಿಂದಲೂ ನರಳುತ್ತಿದ್ದರು ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಮೆಕಾನಿಕಲ್‌ ಎಂಜನಿಯರ್‌ ಆಗಿದ್ದ ಬಸು ಅವರು ದೇಶದ ಪರಮಾಣ ಶಕ್ತಿ ಕಾರ್ಯಕ್ರಮಕ್ಕೆ ಅಪಾರ ಕೊಡುಗೆ ನೀಡಿದ್ದರು. ಅವರ ಕೊಡುಗೆಯನ್ನು ಸ್ಮರಿಸಿ ಕೇಂದ್ರ ಸರ್ಕಾರ 2014ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ADVERTISEMENT

ಭಾರತದ ಮೊದಲ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಹಂತ್‌ಗೆ ಸಂಕೀರ್ಣವಾದ ರಿಯಾಕ್ಟರ್‌ ನಿರ್ಮಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.