ADVERTISEMENT

ಒಡಿಶಾ | 12 ವರ್ಷದ ಬಾಲಕನ ಕೊಲೆ: ಮದರಸಾದ ಐವರು ವಿದ್ಯಾರ್ಥಿಗಳ ಬಂಧನ

ಪಿಟಿಐ
Published 7 ಸೆಪ್ಟೆಂಬರ್ 2025, 6:18 IST
Last Updated 7 ಸೆಪ್ಟೆಂಬರ್ 2025, 6:18 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಭುವನೇಶ್ವರ: 12 ವರ್ಷದ ಬಾಲಕನನ್ನು ಕೊಂದು ಮೃತದೇಹವನ್ನು ಮಲದ ಗುಂಡಿಗೆ ಎಸೆದ ಆರೋಪದ ಮೇಲೆ ಐವರು ಮದರಸಾ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ADVERTISEMENT

ಸೆ.2ರಂದು ನಯಾಗಢ ಜಿಲ್ಲೆಯ ರಣಪುರ ಠಾಣಾ ವ್ಯಾಪ್ತಿಯಲ್ಲಿರುವ ಮದರಸಾದಲ್ಲಿ ಘಟನೆ ನಡೆದಿದ್ದು. ಸೆ.3 ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ 12 ರಿಂದ 15 ವರ್ಷ ವಯಸ್ಸಿನ ಐವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಯಾಗಢದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಸ್ ಚಂದ್ರ ಪಾಂಡಾ ಪಿಟಿಐಗೆ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಮೃತ ಬಾಲಕ ಕಟಕ್‌ ಜಿಲ್ಲೆಯ ಮೂಲದವನು ಎಂದು ಗೊತ್ತಾಗಿದೆ. ಈತ, ಕಿರಿಯ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ. ಆ.31 ರಂದು ಆತನನ್ನು ಕೊಲ್ಲಲು ಪ್ರಯತ್ನ ನಡೆದಿತ್ತು ಎಂದೂ ಅವರು ತಿಳಿಸಿದ್ದಾರೆ.

ಶವ ದೊರೆತ ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತು. ಆದರೆ ದೈಹಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎನ್ನುವುದು ಬಳಿಕ ಗೊತ್ತಾಗಿದೆ. ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕೊಲೆ ಆರೋಪ ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.