ADVERTISEMENT

ಒಡಿಶಾ | ವಿದೇಶಿ ಪ್ರವಾಸಿಗೆ ಲೈಂಗಿಕ ಕಿರುಕುಳ: ಅರ್ಚಕನಿಗೆ ಜೈಲು ಶಿಕ್ಷೆ

ಪಿಟಿಐ
Published 19 ಮಾರ್ಚ್ 2024, 3:25 IST
Last Updated 19 ಮಾರ್ಚ್ 2024, 3:25 IST
   

ಭುವನೇಶ್ವರ: ವಿದೇಶಿ ಮಹಿಳಾ ಪ್ರವಾಸಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಲಿಂಗರಾಜ ದೇವಸ್ಥಾನದ ಅರ್ಚಕನಿಗೆ ಒಡಿಶಾ ನ್ಯಾಯಾಲಯ 18 ತಿಂಗಳು ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಘಟನೆ ನಡೆದ ನಾಲ್ಕೇ ವಾರಗಳಲ್ಲಿ ತೀರ್ಪು ಪ್ರಕಟಗೊಂಡಿದೆ.

ಫೆಬ್ರುವರಿ 19 ರಂದು ಇಲ್ಲಿನ 11ನೇ ಶತಮಾನದ ಲಿಂಗರಾಜ ದೇವಸ್ಥಾನದ ಬಳಿ ಒಂಟಿಯಾಗಿ ತಿರುಗಾಡುತ್ತಿದ್ದ ಸ್ವೀಡನ್ ಪ್ರವಾಸಿಗೆ ಅರ್ಚಕ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋ‍ಪಿಸಲಾಗಿದೆ.

ಘಟನೆಯ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅದೇ ದಿನ ಅರ್ಚಕನನ್ನು ಬಂಧಿಸಲಾಗಿತ್ತು. ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ ಪ್ರಕರಣ ಸಂಬಂಧ (ಫೆಬ್ರುವರಿ 23) ಚಾರ್ಜ್ ಶೀಟ್ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.