ADVERTISEMENT

ಸರಸ್ವತಿ ಪೂಜೆ ದಿನ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 6:41 IST
Last Updated 13 ಫೆಬ್ರುವರಿ 2019, 6:41 IST
   

ಭುವನೇಶ್ವರ್: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಶಾಲೆಯೊಂದರಲ್ಲಿಕಳೆದ ವಾರ ಸರಸ್ವತಿ ಪೂಜೆ ಸಂಭ್ರಮದ ವೇಳೆಬೇರೆ ಶಾಲೆಯ ವಿದ್ಯಾರ್ಥಿಯೊಬ್ಬ 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದು, ಪ್ರಕರಣ ದಾಖಲಾಗಿದೆ.

ಫೆಬ್ರುವರಿ 10ರಂದು ಇಲ್ಲಿನ ಶಾಲೆಯೊಂದರಲ್ಲಿ ಸರಸ್ವತಿ ಪೂಜೆ ನಡೆದಿದ್ದು,ಆ ದಿನ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಅತ್ಯಾಚಾರವೆಸಗಿದ್ದಾನೆ.ಈ ಘಟನೆ ಬಗ್ಗೆ ಮಂಗಳವಾರ ಸಂಜೆ ನಮಗೆ ದೂರು ಲಭಿಸಿದೆಎಂದಿದ್ದಾರೆ ಪೊಲೀಸರು.

ಅತ್ಯಾಚಾರ ಸಂತ್ರಸ್ತೆ ಫೆ.11ರಂದು ಮನೆಯವರ ಮುಂದೆ ಅತ್ಯಾಚಾರದ ವಿಷಯವನ್ನು ಹೇಳಿದ್ದಾಳೆ ಎಂದು ಬರಿಪದ ಸದಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸ್ವರ್ಣಲಲಾ ಮಿಂಜ್ ಹೇಳಿದ್ದಾರೆ.

ADVERTISEMENT

ಆರೋಪಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಬಾಲಕಿಯ ಅತ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ 341, 376 (3), 506 ಸೆಕ್ಷನ್ ಅಡಿಯಲ್ಲಿ ಮತ್ತು ಪೋಕ್ಸೋ ಕಾಯ್ದೆಯಡಿಪ್ರಕರಣ ದಾಖಲಾಗಿದೆ.ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ ಎಂದು ಮಿಂಜ್ ಹೇಳಿದ್ದಾರೆ

ಶಾಲೆಯ ಶೌಚಾಲಯಕ್ಕೆ ಹೋಗಿದ್ದಾಗ ಇನ್ನೊಂದು ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಬೇಲಿ ಹಾರಿ ಬಂದು ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ಥೆ ಹೇಳಿದ್ದಾಳೆ. ಈಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.