ಜಾಜ್ಪುರ್: 20 ವರ್ಷದ ಯುವಕನೊಬ್ಬ ತಂದೆಯನ್ನು ಕೊಚ್ಚಿ ಕೊಂದು, ಮಲತಾಯಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಒಡಿಶಾದ ಜಾಜ್ಪುರ್ ಜಿಲ್ಲೆಯಿಂದ ವರದಿಯಾಗಿದೆ.
ಕುಟುಂಬದಲ್ಲಿ ಏರ್ಪಟ್ಟಿದ್ದ ವಿವಾದದ ಹಿನ್ನೆಲೆಯಲ್ಲಿ ಯುವಕ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಬೇರೆ ಹಳ್ಳಿಯಲ್ಲಿ ವಾಸವಿದ್ದ ಯುವಕ ತಂದೆ ಜೊತೆ ಇರಲು ಮಲತಾಯಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಭಾನುವಾರ ರಾತ್ರಿ ತಂದೆ ಮನೆಗೆ ಹೋಗಿದ್ದ ಯವಕ ಮಲತಾಯಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಈ ಸಂದರ್ಭ ತಂದೆ, ಪತ್ನಿಯ ನೆರವಿಗೆ ಧಾವಿಸಿದ್ದಾರೆ. ಬಳಿಕ, ಮಾತಿಗೆ ಮಾತು ಬೆಳೆದು, ಯುವಕ ಹರಿತವಾದ ಆಯುಧದಿಂದ ತಂದೆಯನ್ನು ಕೊಚ್ಚಿ ಕೊಂದಿದ್ದಾನೆ. ಮಲತಾಯಿ ಮೇಲೆ ಅತ್ಯಾಚಾರ ಎಸಗಿ ಓಡಿಹೋಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಲತಾಯಿ ದೂರಿನ ಮೇಲೆ ಸೋಮವಾರ ಆತನನ್ನು ಬಂಧಿಸಿದ್ದಾರೆ.
‘ತಂದೆ ಕೊಲೆ ಮತ್ತು ಮಲತಾಯಿ ಮೇಲೆ ಅತ್ಯಾಚಾರದ ಕುರಿತಾಗಿ ಆರೋಪಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದೇವೆ. ತನ್ನ ತಂದೆಯೊಂದಿಗೆ ಇರಲು ಯುವಕನಿಗೆ ಮಲತಾಯಿ ಅವಕಾಶ ನೀಡಿರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.