ADVERTISEMENT

ಮುಂಬೈ | ಓಲಾ, ಊಬರ್‌, ರ‍್ಯಾಪಿಡೊಗೆ ತಾತ್ಕಾಲಿಕ ಪರವಾನಗಿ 

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 14:48 IST
Last Updated 15 ಸೆಪ್ಟೆಂಬರ್ 2025, 14:48 IST
...
...   

ಮುಂಬೈ: ಮುಂಬೈ ಮೆಟ್ರೊಪಾಲಿಟನ್‌ ಪ್ರದೇಶದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಹಾಗೂ ಬೈಕ್‌ ಸೇವೆಗಳನ್ನು ಒದಗಿಸಲು ಓಲಾ, ಊಬರ್‌ ಹಾಗೂ ರ‍್ಯಾ‍ಪಿಡೊದ ಮಾತೃ ಸಂಸ್ಥೆಗಳಿಗೆ ತಾತ್ಕಾಲಿಕ ಪರವಾನಗಿ ನೀಡಲು ಮಹಾರಾಷ್ಟ್ರದ ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್‌ಟಿಎ) ಅನುಮೋದನೆ ನೀಡಿದೆ.

ಕೆಲವು ನಿಗದಿತ ಷರತ್ತಿನ ಅನ್ವಯ ಈ ತಾತ್ಕಾಲಿಕ ಪರವಾನಗಿ ನೀಡಲು ಎಸ್‌ಟಿಎ ಅನುಮೋದಿಸಿದ್ದು, ಬೈಕ್‌ ಟ್ಯಾಕ್ಸಿ ಸೇವೆಗೆ ಪ್ರತಿ 1.5 ಕಿ.ಮೀ.ಗೆ ₹15 ಶುಲ್ಕವನ್ನೂ ನಿಗದಿ ಪಡಿಸಿದೆ. 

ಓಲಾದ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೆಟ್‌ ಲಿಮಿಟೆಡ್‌ ಹಾಗೂ ಊಬರ್‌ನ ಮಾತೃ ಸಂಸ್ಥೆ ಊಬರ್‌ ಇಂಡಿಯಾ ಸಿಸ್ಟಮ್ಸ್‌ ‍‍ಪ್ರೈ.ಲಿ. ಮತ್ತು ರ‍್ಯಾಪಿಡೊ ಮಾತೃ ಸಂಸ್ಥೆ ರೊಪ್ಪನ್‌ ಟ್ರ್ಯಾನ್ಸ್‌ಪೋರ್ಟ್‌ ಸರ್ವಿಸ್‌ ಪ್ರೈ.ಲಿ.ಗೆ ಈ ಅನುಮೋದನೆ ನೀಡಲಾಗಿದೆ.

ADVERTISEMENT

ಜತೆಗೆ ಈ ಸಂಸ್ಥೆಗಳು ಒಂದು ತಿಂಗಳ ಒಳಗಾಗಿ ಕಾಯಂ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕು, ಮಹಾರಾಷ್ಟ್ರ ಬೈಕ್‌ ಟ್ಯಾಕ್ಸಿ ನಿಯಮ 2025ರ ಎಲ್ಲಾ ನಿಬಂಧನೆ, ನಿಯಮಗಳನ್ನೂ ಅನುಸರಿಸಬೇಕು ಎಂದೂ ಎಸ್‌ಟಿಎ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.