ADVERTISEMENT

ಭಾರತ: ಫೆಬ್ರುವರಿಯಲ್ಲಿ ಕೋವಿಡ್‌ 3ನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆ: ವರದಿ

ಪಿಟಿಐ
Published 24 ಡಿಸೆಂಬರ್ 2021, 17:02 IST
Last Updated 24 ಡಿಸೆಂಬರ್ 2021, 17:02 IST
ಸಾಂದರ್ಭಿಕ ಚಿತ್ರ (ಕೃಪೆ: ಡೆಕ್ಕನ್ ಹೆರಾಲ್ಡ್)
ಸಾಂದರ್ಭಿಕ ಚಿತ್ರ (ಕೃಪೆ: ಡೆಕ್ಕನ್ ಹೆರಾಲ್ಡ್)   

ನವದೆಹಲಿ: ಭಾರತದಲ್ಲಿ ಕೋವಿಡ್‌ ಮೂರನೇ ಅಲೆಯು 2022ರ ಫೆಬ್ರವರಿ 3ರ ವೇಳೆಗೆ ಉತ್ತುಂಗಕ್ಕೆ ಏರಬಹುದು ಎಂದು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ನಡೆಸಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಕೊರೊನಾ ವೈರಸ್‌ನ ಓಮೈಕ್ರಾನ್ ರೂಪಾಂತರದಿಂದ ಅನೇಕ ದೇಶಗಳಲ್ಲಿ ಪ್ರಕರಣಗಳ ಏರಿಕೆಯ ಪ್ರವೃತ್ತಿ ಕಂಡುಬರುತ್ತಿದೆ. ಇದೇ ಪ್ರವೃತ್ತಿ ಭಾರತದಲ್ಲೂ ಕಂಡುಬರಲಿದೆ ಎಂಬ ಊಹೆಯನ್ನು ಅಧ್ಯಯನ ಆಧರಿಸಿದೆ.

ಅಮೆರಿಕ, ಬ್ರಿಟನ್‌, ಜರ್ಮನಿ, ರಷ್ಯಾದಂತಹ ದೇಶಗಳಲ್ಲಿನ ಮೂರನೇ ಅಲೆಯ ಅಂಕಿ–ಅಂಶಗಳನ್ನು ಸಂಶೋಧಕರು ಅಧ್ಯಯನದಲ್ಲಿ ಪರಿಗಣಿಸಿದ್ದಾರೆ.

ADVERTISEMENT

ಭಾರತದಲ್ಲಿನ ಮೂರನೇ ಅಲೆಯ ಪರಿಣಾಮ ಮತ್ತು ನಿಗದಿತ ಅವಧಿಯನ್ನು ಊಹಿಸಲು ಈ ದೇಶಗಳಲ್ಲಿನ ಪ್ರಕರಣಗಳ ದೈನಂದಿನ ಅಂಕಿ–ಅಂಶಗಳನ್ನು ಸಂಶೋಧಕರು ಮಾದರಿಯನ್ನಾಗಿ ಬಳಸಿದ್ದಾರೆ. ಈ ಆಧಾರದ ಮೇಲೆ 2022ರ ಫೆಬ್ರುವರಿ ಹೊತ್ತಿಗೆ ಭಾರತದಲ್ಲಿ ಮೂರನೇ ಅಲೆ ಉತ್ತಂಗಕ್ಕೇರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.