ADVERTISEMENT

ಬಿಸಿಗಾಳಿ ಪುನರಾವರ್ತನೆಗೆ ಬಿಸಿಗಾಳಿಯೇ ಕಾರಣ!

ಪಿಟಿಐ
Published 15 ಏಪ್ರಿಲ್ 2025, 14:36 IST
Last Updated 15 ಏಪ್ರಿಲ್ 2025, 14:36 IST
   

ನವದೆಹಲಿ: ಒಂದು ಬಾರಿ ಬಿಸಿಗಾಳಿ ಬೀಸಲು ಆರಂಭವಾದರೆ ಅದು ಮತ್ತಷ್ಟು ಬಿಸಿಗಾಳಿಯ ಸೃಷ್ಟಿಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ವಿವಿಧ ದೇಶಗಳಲ್ಲಿ 2022ರ ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ತೀವ್ರ ಬಿಸಿಗಾಳಿ ದಾಖಲಾಗಿತ್ತಲ್ಲದೇ, ಪದೇ ಪದೇ ಬಿಸಿಗಾಳಿ ಕಾಡಿದ ವರದಿಯಾಗಿತ್ತು. ಇದಕ್ಕೆ ಕಾರಣ ಪತ್ತೆಹಚ್ಚುವುದಕ್ಕಾಗಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ–ಬಾಂಬೆ ಹಾಗೂ ಜರ್ಮನಿಯ ಜೊಹಾನಸ್ ಗುಟೆನ್‌ಬರ್ಗ್‌ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ನಡೆಸಿದ್ದರು.

ಈ ವೇಳೆ, ಮೊದಲು ಬೀಸುವ ಬಿಸಿಗಾಳಿಯು ಮಣ್ಣಿನಿಂದ ತೇವಾಂಶ ತೆಗದುಹಾಕುವ ಮೂಲಕ ಮಣ್ಣು ಒಣಗಲು ಕಾರಣವಾಗುತ್ತದೆ. ಇದರಿಂದ ಅತಿಯಾದ ಶುಷ್ಕ ವಾತಾವರಣ ಸೃಷ್ಟಿಯಾಗಿ, ಮತ್ತೊಂದು ಬಿಸಿಗಾಳಿ ಇನ್ನಷ್ಟು ತೀವ್ರವಾಗಿರುವಂತೆ ಮಾಡುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.