ADVERTISEMENT

ಇಂದೋರ್‌ ಬಾಲಾಶ್ರಮ: ಕಾಲರಾಗೆ ಮತ್ತೊಂದು ಮಗು ಮೃತ

ಪಿಟಿಐ
Published 6 ಆಗಸ್ಟ್ 2024, 15:54 IST
Last Updated 6 ಆಗಸ್ಟ್ 2024, 15:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಂದೋರ್‌: ಕಾಲರಾ ರೋಗಕ್ಕೆ ತುತ್ತಾಗಿ 10 ಮಕ್ಕಳು ಮೃತಪಟ್ಟ ಕಾರಣ ಸುದ್ದಿಯಲ್ಲಿದ್ದ ಮಧ್ಯಪ್ರದೇಶದ ಇಂದೋರ್‌ನ ಶ್ರೀ ಯುಗಪುರುಷ ಧಾಮ ಬಲಾಶ್ರಮದಲ್ಲಿ ಮೂರು ವರ್ಷ ವಯಸ್ಸಿನ ಬಾಲಕಿ ಸೋಮವಾರ ರಾತ್ರಿ ಮೃತಪಟ್ಟಿದ್ದಾಳೆ. ಈ ಮೂಲಕ, ಕಳೆದ ಒಂದೂವರೆ ತಿಂಗಳಲ್ಲಿ ಈ ಆಶ್ರಮದಲ್ಲಿ 11 ಮಕ್ಕಳು ಮೃತಪಟ್ಟಂತಾಗಿದೆ.

‘ವಾಂತಿ, ಅತಿಸಾರ, ನಿರ್ಜಲೀಕರಣದಿಂದ ಬಳಲುತ್ತಿದ್ದ ಬಾಲಕಿಯನ್ನು ಆಗಸ್ಟ್‌ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೇ ಆಕೆಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ವೈದ್ಯರ ಪರಿಶ್ರಮದ ಹೊರತಾಗಿಯೂ ಆಕೆ ಬದುಕುಳಿಯಲಿಲ್ಲ ಎಂದು ಇಲ್ಲಿಯ ಚಾಚಾ ನೆಹರೂ ಬಾಲ ಚಿಕಿತ್ಸಾಲಯದ ವೈದ್ಯರು ಹೇಳಿದ್ದಾರೆ. 

ADVERTISEMENT

ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈಚೆಗಷ್ಟೇ ಪೋಷಕರ ಸುಪರ್ದಿಗೆ ಆಕೆಯನ್ನು ನೀಡಲಾಗಿತ್ತು ಎಂದು ಆಶ್ರಮದ ಆಡಳಿತ ತಿಳಿಸಿದೆ ಎಂದು ವೈದ್ಯರು ಹೇಳಿದ್ದಾರೆ.‌

ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಆಶ್ರಮದ ಇರಿಸಿಕೊಳ್ಳಲಾಗಿದೆ ಮತ್ತು ನಿರ್ವಹಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಈ ಸಾವುಗಳ ಕುರಿತು ತನಿಖೆ ನಡೆಸಲು ನೇಮಿಸಲಾಗಿದ್ದ ಉನ್ನತ ಸಮಿತಿಯು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.