ADVERTISEMENT

ಆನ್‌ಲೈನ್‌ ವಿಡಿಯೊ ವೀಕ್ಷಕರ ಸಂಖ್ಯೆ 50 ಕೋಟಿ ದಾಟುವ ನಿರೀಕ್ಷೆ

ಪಿಟಿಐ
Published 9 ಮೇ 2019, 18:36 IST
Last Updated 9 ಮೇ 2019, 18:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ, ಆನ್‌ಲೈನ್‌ ವಿಡಿಯೊ ವೀಕ್ಷಿಸಿ ಖರೀದಿ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂತಹ ಗ್ರಾಹಕರ ಸಂಖ್ಯೆ 2020ರ ವೇಳೆಗೆ 50 ಕೋಟಿ ದಾಟಲಿದೆ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ ಹೇಳಿದೆ.

’ಇಯರ್‌ ಇನ್‌ ಸರ್ಚ್‌–ಇಂಡಿಯಾ: ಇನ್‌ಸೈಟ್ಸ್‌ ಫಾರ್‌ ಬ್ರ್ಯಾಂಡ್ಸ್‌‘ ಎಂಬ ವರದಿಯನ್ನು ಗುರುವಾರ ಪ್ರಕಟಿಸಿರುವ ಗೂಗಲ್‌, ’ಆನ್‌ಲೈನ್‌ ವಿಡಿಯೊ ಮೂಲಕ ಶೇ 30ರಷ್ಟು ಜನರು ಮನರಂಜನೆ ಕುರಿತಾದ ಮಾಹಿತಿ ಹುಡುಕಿರುವುದು ಅಧ್ಯಯನದಿಂದ ತಿಳಿದು ಬಂದಿದೆ‘ ಎಂದು ಗೂಗಲ್‌ನ ಭಾರತ ಶಾಖೆಯ ನಿರ್ದೇಶಕ ವಿಕಾಸ್‌ ಅಗ್ನಿಹೋತ್ರಿ ಹೇಳುತ್ತಾರೆ.

ಜೀವನ ಶೈಲಿ, ಶಿಕ್ಷಣ ಹಾಗೂ ವ್ಯಾಪಾರ–ವಹಿವಾಟಿಗೆ ಸಂಬಂಧಿಸಿದ ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸುವವರ ಸಂಖ್ಯೆ ನಂತರದ ಸ್ಥಾನದಲ್ಲಿದೆ ಎಂದು ವರದಿ ತಿಳಿಸುತ್ತದೆ.

ADVERTISEMENT

’ವಸ್ತುವಿನ ಕುರಿತಂತೆ ಮಾಹಿತಿ ಸಂಗ್ರಹಿಸುವ ಜೊತೆಗೆ, ಅದನ್ನು ಖರೀದಿಸುವ ಕುರಿತಂತೆ ನಿರ್ಧಾರ ಕೈಗೊಳ್ಳುವುದರ ಮೇಲೆ ಆನ್‌ಲೈನ್‌ ವಿಡಿಯೊ ವೀಕ್ಷಣೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಶೇ 80ಕ್ಕೂ ಅಧಿಕ ಗ್ರಾಹಕರು ಕಾರು ಖರೀದಿಗೂ ಮುನ್ನ, ಮಾಹಿತಿಗಾಗಿ ಆನ್‌ಲೈನ್‌ ವಿಡಿಯೊ ಮೊರೆ ಹೋಗಿರುವುದು‘ ಅಧ್ಯಯನದಿಂದ ತಿಳಿದುಬಂದಿದೆ ಎಂದೂ ಗೂಗಲ್‌ ವಿವರಿಸಿದೆ.

***

* ಪ್ರತಿವರ್ಷ ಇಂಟರ್‌ನೆಟ್‌ ಬಳಕೆದಾರರ ಪ್ರಮಾಣ 4 ಕೋಟಿಯಷ್ಟು ಹೆಚ್ಚಾಗುತ್ತಿದೆ

* ಪ್ರತಿವರ್ಷ ಗೂಗಲ್‌ನ ’ವಾಯ್ಸ್‌ ಸರ್ಚ್‌‘ ಸೌಲಭ್ಯ ಬಳಸುತ್ತಿರುವವರ ಸಂಖ್ಯೆಯಲ್ಲಿಶೇ 270 ಹೆಚ್ಚಳವಾಗಿದೆ

*ಹೊಸದಾಗಿ ಇಂಟರ್‌ನೆಟ್‌ ಬಳಸುವ 10 ಗ್ರಾಹಕರ ಪೈಕಿ9 ಮಂದಿ ಪ್ರಾದೇಶಿಕ ಭಾಷೆ ಬಳಸುವವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.