ADVERTISEMENT

ರಾಜಕೀಯ ಲಾಭಕ್ಕಾಗಿ ಭೂಪಟ ಪರಿಷ್ಕರಣೆ

ಪಿಟಿಐ
Published 9 ಜುಲೈ 2020, 2:47 IST
Last Updated 9 ಜುಲೈ 2020, 2:47 IST

ನವದೆಹಲಿ: ಭಾರತ ಮತ್ತು ನೇಪಾಳದ ನಡುವೆ ಮಾತುಕತೆಗೆ ನೆರವಾಗುವ ವಾತಾವರಣ ಸೃಷ್ಟಿಸುವ ಹೊಣೆ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಮೇಲಿದ್ದು, ನೇಪಾಳದ ಹೊಸ ರಾಜಕೀಯ ಭೂಪಟದ ಬಿಡುಗಡೆಯು ರಾಜಕೀಯ ಲಾಭದ ಭಾಗವಾಗಿತ್ತು ಎಂದು ಮೂಲಗಳು ಸೋಮವಾರ ತಿಳಿಸಿವೆ.

ಭೂಪಟ ಪರಿಷ್ಕರಿಸುವ ಮೂಲಕಗಡಿ ಸಮಸ್ಯೆಯನ್ನು ರಾಜಕೀಯಗೊಳಿಸುವುದು ಒಲಿ ಸರ್ಕಾರದ ಉದ್ದೇಶವಾಗಿತ್ತು. ದಶಕದಿಂದ ಇರುವ ಈ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನೇಪಾಳ ಸರ್ಕಾರ ಗಂಭೀರವಾಗಿಲ್ಲ ಎನ್ನುವುದು ಈ ನಡೆಯಿಂದ ಸ್ಪಷ್ಟವಾಗಿತ್ತು. ಯಾವುದೇ ಸಾಕ್ಷ್ಯ ಅಥವಾ ಆಧಾರಗಳಿಲ್ಲದೆ ಭೂಪಟವನ್ನು ಪರಿಷ್ಕರಿಸಿದ್ದು ರಾಜಕೀಯ ಲಾಭದ ಉದ್ದೇಶವನ್ನು ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT