ADVERTISEMENT

ಜಮ್ಮು–ಶ್ರೀನಗರ ವಿಮಾನ ನಿಲ್ದಾಣ: ರಾತ್ರಿ ವೇಳೆ ವಿಮಾನ ಹಾರಾಟಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 15:47 IST
Last Updated 20 ಏಪ್ರಿಲ್ 2022, 15:47 IST
 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜನ ಹಾಗೂ ಸ್ಥಳೀಯರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಮ್ಮು ಮತ್ತು ಶ್ರೀನಗರ ವಿಮಾನ ನಿಲ್ದಾಣಗಳಲ್ಲಿ ಏಪ್ರಿಲ್‌ 21ರಿಂದ ರಾತ್ರಿ ವೇಳೆ ವಿಮಾನಗಳ ಹಾರಾಟ ಆರಂಭವಾಗಲಿದೆ.

‘ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಶ್ರೀನಗರ ವಿಮಾನ ನಿಲ್ದಾಣಗಳಲ್ಲಿ ರಾತ್ರಿ ವೇಳೆಯ ಕಾರ್ಯಾಚರಣೆಗೆ ಅನುಮತಿ ನೀಡಿದ್ದು, ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ಏಪ್ರಿಲ್‌ 21ರಿಂದ ರಾತ್ರಿ ಹೊತ್ತಿನಲ್ಲಿ ವಿಮಾನ ಹಾರಾಟ ಆರಂಭವಾಗಲಿದ್ದು, ಇದರಿಂದ ವಿಮಾನಗಳ ಆಗಮನ ಹಾಗೂ ನಿರ್ಗಮನದ ಸಂಖ್ಯೆ ಹೆಚ್ಚಾಗಲಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.

ಕಾಶ್ಮೀರಕ್ಕೆ ಬೇಸಿಗೆ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮಾರ್ಚ್‌ ತಿಂಗಳವೊಂದರಲ್ಲೇ 1.8 ಲಕ್ಷ ಪ್ರವಾಸಿಗರು ಕಣಿವೆಗೆ ಭೇಟಿ ನೀಡಿದ್ದಾರೆ. ಇದು ಕಳೆದ ಹತ್ತು ವರ್ಷಗಳಲ್ಲಿ ಅತಿಹೆಚ್ಚು. ಕಳೆದ ವಾರ ದಾಖಲೆಯ 102 ವಿಮಾನಗಳು ಶ್ರೀನಗರ ವಿಮಾನ ನಿಲ್ದಾಣದಿಂದ ಸಂಚಾರ ನಡೆಸಿದ್ದು, ಆಗಮನ ಹಾಗೂ ನಿರ್ಗಮನ ಸೇರಿ ಒಟ್ಟು 16,110 ಪ್ರಯಾಣಿಕರು ಸಂಚರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರವು ನಿರೀಕ್ಷೆ ಇಟ್ಟುಕೊಂಡಿದೆ.

ADVERTISEMENT

ಶ್ರೀನಗರ ಮತ್ತು ಜಮ್ಮು ವಿಮಾನ ನಿಲ್ದಾಣಗಳಲ್ಲಿ ರಾತ್ರಿ ವೇಳೆ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಿರುವ ನಿರ್ಧಾರವು ಸೂಕ್ತ ಸಮಯದಲ್ಲಿ ಹೊರಬಿದ್ದಿದೆ. ರಾತ್ರಿಯ ವೇಳೆಯ ವಿಮಾನಗಳ ಕಾರ್ಯಾಚರಣೆಯಿಂದ ಹೊರಗಿನ ಪ್ರದೇಶಗಳಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ತೆರಳಲು ಸ್ಥಳೀಯ ಉದ್ಯಮಿಗಳು ಹಾಗೂ ಇತರರು ಅನುಕೂಲ ಒದಗಿಸಿದೆ.

‘ರಾತ್ರಿ ವೇಳೆಯ ವಿಮಾನಗಳ ಕಾರ್ಯಾಚರಣೆಯಿಂದ ಎಲ್ಲರಿಗೂ ಅನುಕೂಲವಾಗಿದೆ. ವಿಶೇಷವಾಗಿ ಒಂದು ದಿನದ ಮಟ್ಟಿಗೆ ಸಣ್ಣಪುಟ್ಟ ಕೆಲಸಕ್ಕೆ ದೆಹಲಿಗೆ ಹೋಗಿ ಬರುವ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ’ ಎಂದು ಉದ್ಯಮಿ ಫಿರೋಜ್‌ ಅಹ್ಮದ್‌ ಹೇಳಿದರು.


‘ರಾತ್ರಿ ವೇಳೆಯ ವಿಮಾನಗಳ ಕಾರ್ಯಾಚರಣೆಯಿಂದ ಎಲ್ಲರಿಗೂ ಅನುಕೂಲವಾಗಿದೆ. ವಿಶೇಷವಾಗಿ ಒಂದು ದಿನದ ಮಟ್ಟಿಗೆ ಸಣ್ಣಪುಟ್ಟ ಕೆಲಸಕ್ಕೆ ದೆಹಲಿಗೆ ಹೋಗಿ ಬರುವ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ’ ಎಂದು ಉದ್ಯಮಿ ಫಿರೋಜ್‌ ಅಹ್ಮದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.