ADVERTISEMENT

ಸಂಘರ್ಷಲ್ಲಿ ಪಾಕ್ ಮೇಲುಗೈ ಸಾಧಿಸಿದ್ದಾಗಿ ಅಮೆರಿಕ–ಚೀನಾದಿಂದ ವರದಿ: ಕಾಂಗ್ರೆಸ್

ಪಿಟಿಐ
Published 20 ನವೆಂಬರ್ 2025, 15:59 IST
Last Updated 20 ನವೆಂಬರ್ 2025, 15:59 IST
ಜೈರಾಮ್ ರಮೇಶ್ 
ಜೈರಾಮ್ ರಮೇಶ್    

ನವದೆಹಲಿ: ‘2025ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್‌ ದಾಳಿಯನ್ನು ಪಾಕಿಸ್ತಾನವೇ ನಡೆಸಿತ್ತು. ಇದೊಂದು ಬಂಡಾಯದ ದಾಳಿಯಾಗಿತ್ತು. ಜೊತೆಗೆ, ನಾಲ್ಕು ದಿನಗಳ ಪಾಕಿಸ್ತಾನ–ಭಾರತದ ಸಂಘರ್ಷದಲ್ಲಿ ಪಾಕಿಸ್ತಾನವೇ ಯಶಸ್ವಿಯಾಯಿತು’ ಎಂದು ಅಮೆರಿಕ–ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಸಮಿತಿಯು ತನ್ನ ವಾರ್ಷಿಕ ವರದಿಯನ್ನು ಸಂಸತ್ತಿಗೆ ಸಲ್ಲಿಸಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಈ ವರದಿಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಇದು ಭಾರತದ ರಾಜತಾಂತ್ರಿಕತೆಗೆ ಆದ ಹಿನ್ನಡೆ. ಈ ವರದಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ವಿದೇಶಾಂಗ ಸಚಿವಾಲಯದವರು ಆಕ್ಷೇಪಣೆ ಸಲ್ಲಿಸಲಿದ್ದಾರೆಯೆ’ ಎಂದು ಪ್ರಶ್ನಿಸಿದೆ. ‘800 ಪುಟಗಳ ವರದಿಯಲ್ಲಿ 108 ಮತ್ತು 109ನೇ ಪುಟಗಳಲ್ಲಿ ಈ ಮಾಹಿತಿ ಇದೆ’ ಎಂದೂ ಹೇಳಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಾನೇ ಆಪರೇಷ್‌ ಸಿಂಧೂರವನ್ನು ನಿಲ್ಲಿಸಿದೆ ಎಂದು ಸುಮಾರು 60 ಬಾರಿ ಹೇಳಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಈ ಬಗ್ಗೆ ಮೌನ ವಹಿಸಿದ್ದಾರೆ. ಈಗ ಈ ವರದಿ ಬಂದಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.