ADVERTISEMENT

ಆಪರೇಷನ್‌ ಸಿಂಧೂರ | ಸೇನಾ ಸ್ವಾವಲಂಬನೆಯ ಪ್ರತೀಕ: ಸಮೀರ್‌ ಕಾಮತ್‌

ಪಿಟಿಐ
Published 9 ಆಗಸ್ಟ್ 2025, 16:20 IST
Last Updated 9 ಆಗಸ್ಟ್ 2025, 16:20 IST
   

ಪುಣೆ : ‘ಆಪರೇಷನ್‌ ಸಿಂಧೂರ’ವು ಭಾರತೀಯ ಸೇನೆಯ ಸ್ವಾವಲಂಬನೆ, ದೂರದೃಷ್ಟಿಯ ಕಾರ್ಯತಂತ್ರ ಮತ್ತು ದೇಶಿಯ ತಾಂತ್ರಿಕ ಬಲದ ಪ್ರತೀಕ ಎಂದು ರಕ್ಷಣಾ ಸಂಶೋಧನೆ ಮತ್ತು‌ ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮುಖ್ಯಸ್ಥ ಸಮೀರ್‌ ಕಾಮತ್‌ ಅವರು ಶನಿವಾರ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಶ್ಚಿಮದ ಗಡಿಯಲ್ಲಿ ನಡೆದ ಕಾರ್ಯಚರಣೆಯು ನಮ್ಮ ಯೋಧರ ಸಾಮರ್ಥ್ಯ ಮಾತ್ರವಲ್ಲದೇ ತಾಂತ್ರಿಕ ಶಕ್ತಿಯನ್ನು ತೋರಿಸಿದೆ. ಸ್ವದೇಶಿ ತಂತ್ರಜ್ಞಾನದ ಮೂಲಕ ಭಾರತ ತನ್ನ ಗಡಿಯನ್ನು ರಕ್ಷಿಸಿಕೊಳ್ಳುವಲ್ಲಿ ಸಮರ್ಥವಾಗಿದೆ ಎನ್ನುವುದಕ್ಕೆ ‘ಆಪರೇಷನ್‌ ಸಿಂಧೂರ’ ನಿದರ್ಶನವಾಗಿದೆ’ ಎಂದು ಹೇಳಿದರು.

‘ಆಪರೇಷನ್‌ ಸಿಂಧೂರ’ದಲ್ಲಿ ಬಳಕೆಯಾದ ಆಕಾಶ್‌, ಬ್ರಹ್ಮೋಸ್‌ ಕ್ಷಿಪಣಿ, ಡಿ4 ಡ್ರೋನ್ ನಿಗ್ರಹ ವ್ಯವಸ್ಥೆ, ಆಕಾಶ್‌ತೀರ್ ವಾಯು ರಕ್ಷಣಾ ವ್ಯವಸ್ಥೆ ಸೇರಿದಂತೆ ಹಲವು ರಕ್ಷಣಾ ಪರಿಕರಗಳನ್ನು ಡಿಆರ್‌ಡಿಒ ತಯಾರಿಸಿದೆ’ ಎಂದು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.