ADVERTISEMENT

ಪುದುಚೇರಿ: ಬಹುಮತ ಸಾಬೀತುಪಡಿಸಲು ವಿರೋಧ ಪಕ್ಷಗಳ ಒತ್ತಾಯ

ವಿಶೇಷ ಅಧಿಕಾರಿಗೆ ಮನವಿ ಸಲ್ಲಿಸಿದ ಎನ್‌.ರಂಗಸ್ವಾಮಿ ನೇತೃತ್ವದ ವಿರೋಧ ಪಕ್ಷಗಳ ನಿಯೋಗ

ಪಿಟಿಐ
Published 17 ಫೆಬ್ರುವರಿ 2021, 11:05 IST
Last Updated 17 ಫೆಬ್ರುವರಿ 2021, 11:05 IST
ಸಿಎಂ ನಾರಾಯಣಸ್ವಾಮಿ
ಸಿಎಂ ನಾರಾಯಣಸ್ವಾಮಿ    

ಪುದಚೇರಿ: ನಾಲ್ವರು ಶಾಸಕರ ರಾಜೀನಾಮೆಯಿಂದಾಗಿ ಅಲ್ಪಮತಕ್ಕೆ ಕುಸಿದಿರುವ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ನೇತೃತ್ವದ ಸರ್ಕಾರಕ್ಕೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡುವಂತೆ ಕೋರಿ ಎಐಎನ್‌ಆರ್‌ಸಿ ನೇತೃತ್ವದ ವಿರೋಧಪಕ್ಷಗಳ ನಿಯೋಗ ಬುಧವಾರ ಲೆಫ್ಟಿನೆಂಟ್ ಗವರ್ನರ್‌ಗೆ ಮನವಿ ಸಲ್ಲಿಸಿದೆ.

ಶಾಸಕ ಜಾನ್‌ಕುಮಾರ್ ಅವರ ರಾಜೀನಾಮೆ ಮೂಲಕ ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

ಹೀಗಾಗಿ, ವಿಧಾನಸಭೆಯ ವಿರೋಧ ಪಕ್ಷ ಎಐಎನ್‌ಆರ್‌ ಕಾಂಗ್ರೆಸ್‌ನ ಎನ್‌.ರಂಗಸ್ವಾಮಿ ನೇತೃತ್ವದಲ್ಲಿ 14 ಶಾಸಕರ ನಿಯೋಗ, ವಿ.ನಾರಾಯಣ ಸ್ವಾಮಿಯವರು ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿ, ಇಲ್ಲಿನ ಜಿ.ರಾಜ್‌ ನಿವಾಸ್‌ದಲ್ಲಿನ ವಿಶೇಷ ಕರ್ತವ್ಯ ಅಧಿಕಾರಿ ಜಿ. ತೇವಾನಿಧಿ ದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿತು.

ADVERTISEMENT

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎನ್‌.ರಂಗಸಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸದನದಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಂಮತ್ರಿಯವರಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ವಿಶೇಷ ಕರ್ತವ್ಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ‘ ಎಂದು ಹೇಳಿದರು.

ಮಂಗಳವಾರದ ಅಚ್ಚರಿಯ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಭವನದ ಸೂಚನೆ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ವಜಾಗೊಳಿಸಲಾಯಿತು. ಹೊಸ ರಾಜ್ಯಪಾಲರ ನೇಮಕವಾಗುವವರೆಗೆ ತೆಲಂಗಾಣದ ರಾಜ್ಯಪಾಲೆ ತಮಿಳ್‌ ಸಾಯಿ ಸೌಂದರ್‌ರಾಜನ್‌ ಅವರಿಗೆ ಉಸ್ತುವಾರಿವಹಿಸಲಾಯಿತು.

ಮೂಲಗಳ ಪ್ರಕಾರ ಗುರುವಾರ ತಮಿಳ್‌ ಸಾಯಿ ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.