ADVERTISEMENT

ಮತಬ್ಯಾಂಕ್‌ ಕಳೆದುಕೊಳ್ಳುವ ಭೀತಿ: ಪ್ರಧಾನಿ ಮೋದಿ ಲೇವಡಿ

ಸ್ಫೋಟ ಪ್ರಕರಣದ ತೀರ್ಪನ್ನು ಪ್ರತಿಪಕ್ಷಗಳು ಸ್ವಾಗತಿಸಿಲ್ಲ ಎಂಬ ಆರೋಪ

ಪಿಟಿಐ
Published 24 ಫೆಬ್ರುವರಿ 2022, 20:13 IST
Last Updated 24 ಫೆಬ್ರುವರಿ 2022, 20:13 IST
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾಗಿಯಾಗಿದ್ದ ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರೊಬ್ಬರು ತಮ್ಮ ದಿರಿಸಿನಿಂದ ಗಮನ ಸೆಳೆದರು–ಪಿಟಿಐ ಚಿತ್ರ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾಗಿಯಾಗಿದ್ದ ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರೊಬ್ಬರು ತಮ್ಮ ದಿರಿಸಿನಿಂದ ಗಮನ ಸೆಳೆದರು–ಪಿಟಿಐ ಚಿತ್ರ   

ಅಮೇಠಿ (ಉತ್ತರ‌ಪ್ರದೇಶ): ತಮ್ಮ ಮತಬ್ಯಾಂಕ್‌ ಕಳೆದುಕೊಳ್ಳುವ ಭೀತಿಯಿಂದ, ಅಹಮದಾಬಾದ್ ಸ್ಫೋಟ ಪ್ರಕರಣದ ತೀರ್ಪನ್ನು ಸ್ವಾಗತಿಸುವ ಧೈರ್ಯವನ್ನು ಪ್ರತಿಪಕ್ಷಗಳು ತೋರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಆರೋಪಿಸಿದ್ದಾರೆ.

ಅಮೇಠಿ, ಪ್ರಯಾಗರಾಜ್ ಹಾಗೂ ಸುಲ್ತಾನ್‌ಪುರದಲ್ಲಿ ಸರಣಿ ಚುನಾವಣಾ ಸಮಾವೇಶಗಳನ್ನು ಉದ್ದೇಶಿಸಿ ಪ್ರಧಾನಿಮಾತನಾಡಿದರು. ಕಾಶಿ ಹಾಗೂ ಅಯೋಧ್ಯೆಯಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಪ್ರತಿಪಕ್ಷಗಳು ಕೋಮುದೃಷ್ಟಿಯಿಂದ ನೋಡುತ್ತಿವೆ ಎಂದು ಅವರು ಪ್ರಯಾಗರಾಜ್‌ನಲ್ಲಿ ಆರೋಪಿಸಿದರು. ‘ಪ್ರಯಾಗರಾಜ್ ಎಂಬ ಹೆಸರು ಹೆಮ್ಮಯ ಪ್ರತೀಕ. ಆದರೆ ಈ ಹೆಸರನ್ನು ವಿರೋಧಿಸುವವರು ಜನರಿಗಾಗಿ ಏನನ್ನೂ ಮಾಡಲಾರರು’ ಎಂದು ಪ್ರಧಾನಿ ಟೀಕಿಸಿದರು. ಯೋಗಿ ಆದಿತ್ಯನಾಥ ಅವರ ಸರ್ಕಾರವು ಅಲಹಾಬಾದ್‌ ಅನ್ನು ಪ್ರಯಾಗರಾಜ್ ಎಂದು ಬದಲಿಸಿತ್ತು.

‘ಭಾರತದಲ್ಲಿರುವ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ನಾವು ಅವಕಾಶ ಕಲ್ಪಿಸಿದರೆ, ಪ್ರತಿಪಕ್ಷಗಳು ಇದನ್ನು ಕೋಮುದೃಷ್ಟಿಯಿಂದ ನೋಡುತ್ತವೆ’ ಎಂದು ಪ್ರಧಾನಿ ಮೋದಿ ಆರೋಪಿಸಿದರು.

ADVERTISEMENT

* ಜನಸಂಘದ ದಿನದಿಂದಲೂ ಬಿಜೆಪಿ ಎಂದಿಗೂ ‘ತಂದೆ–ಮಗನ ಕಂಪನಿ’ ಆಗಿಲ್ಲ. ದೇಶದ ವಿವಿಧ ಭಾಗಗಳಿಂದ ಬಂದವರು ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

–ನರೇಂದ್ರ ಮೋದಿ, ಪ್ರಧಾನಿ

*ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಕೋಮು ಆಧಾರದಲ್ಲಿ ವಿಭಜಿಸುವ ಕಾರ್ಯಸೂಚಿಯನ್ನು ಹೊಂದಿದ್ದಾರೆ.

–ಸೀತಾರಾಮ್ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಚುನಾವಣಾ ಕಣದಲ್ಲಿ...

*ಉತ್ತರ ಪ್ರದೇಶದಲ್ಲಿ ಬುಧವಾರ ನಡೆದ ನಾಲ್ಕನೇ ಹಂತದ ಮತದಾನದಲ್ಲಿ ಶೇ 61.5ರಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಜ್ಯದ 403 ವಿಧಾನಸಭಾ ಕ್ಷೇತ್ರಗಳ ಪೈಕಿ 231 ಕ್ಷೇತ್ರಗಳ ಮತದಾನ ಪೂರ್ಣಗೊಂಡಿದೆ

*ಉತ್ತರಾಖಂಡದಲ್ಲಿ ಚಲಾವಣೆಯಾದ ಅಂಚೆ ಮತಪತ್ರಗಳನ್ನು ತಿರುಚಲಾ ಗಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ವರದಿ ನೀಡುವಂತೆ ಪಿತೋರ್‌ಗಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಸೇನಾ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬರು ಹಲವು ಅಂಚೆ ಮತಗಳ ಮೇಲೆ ಸಹಿ ಮಾಡುತ್ತಿರುವ ದೃಶ್ಯ ಇರುವ ವಿಡಿಯೊವನ್ನು ಬುಧವಾರ ಬಿಡುಗಡೆ ಮಾಡಿದ್ದರಾಜ್ಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ತನಿಖೆಗೆ ಆಗ್ರಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.