ADVERTISEMENT

ಪಾಕಿಸ್ತಾನ: ನೂರಾರು ಪಿಟಿಐ ಕಾರ್ಯಕರ್ತರ ಬಂಧನ

ಪಿಟಿಐ
Published 24 ಮೇ 2022, 14:11 IST
Last Updated 24 ಮೇ 2022, 14:11 IST
ಲಾಹೋರ್‌ನಲ್ಲಿ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ಲಾಹೋರ್‌ನಲ್ಲಿ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ   

ಲಾಹೋರ್‌: ಮರು ಚುನಾವಣೆಗೆ ಒತ್ತಾಯಿಸಿ ಪಂಜಾಬ್‌ ಪ್ರಾಂತ್ಯದಿಂದ ರಾಜಧಾನಿ ಇಸ್ಲಾಮಾಬಾದ್‌ ವರೆಗೆ ನಡೆದ ಬೃಹತ್‌ ರ‍್ಯಾಲಿಯಲ್ಲಿ ಪಾಲ್ಗೊಂಡ ಪಾಕಿಸ್ತಾನದ ನಿಕಟ ಪೂರ್ವ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷಕ್ಕೆ ಸೇರಿದ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.

’ಆಜಾದಿ ಮಾರ್ಚ್‌‘ ಹೆಸರಿನಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಮಹಿಳಾ ಜನಪ್ರತಿಧಿ ರಶೀದ್‌ ಖಾನುಮ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಇದನ್ನು ತಡೆಯುವ ಸಲುವಾಗಿ ಆಡಳಿತರೂಢ ಪಕ್ಷ ಪಾಕಿಸ್ತಾನ್‌ ಮುಸ್ಲಿಂ ಲೀಗ್‌– ಎನ್‌(ಪಿಎಂಎಲ್‌–ಎನ್‌) ಸೂಚನೆ ಮೇರೆಗೆ ಪಿಟಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT