ADVERTISEMENT

1,300ಕ್ಕೂ ಅಧಿಕ IAS, 586ಕ್ಕೂ ಅಧಿಕ IPS ಹುದ್ದೆಗಳು ಖಾಲಿ ಇವೆ: ಕೇಂದ್ರ

ಪಿಟಿಐ
Published 12 ಡಿಸೆಂಬರ್ 2024, 11:12 IST
Last Updated 12 ಡಿಸೆಂಬರ್ 2024, 11:12 IST
<div class="paragraphs"><p>ರಾಜ್ಯಸಭೆ </p></div>

ರಾಜ್ಯಸಭೆ

   

ನವದೆಹಲಿ: ದೇಶದಲ್ಲಿ 1,316ಕ್ಕೂ ಅಧಿಕ ಐಎಎಸ್ ಮತ್ತು 586 ಐಪಿಎಸ್ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಒಟ್ಟು 6,858 ಐಎಎಸ್ ಹುದ್ದೆಗಳಿದ್ದು, ಈ ಪೈಕಿ 5,542 ಹುದ್ದೆಗಳು ಭರ್ತಿಯಾಗಿವೆ ಎಂದು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 5,055 ಐಪಿಎಸ್ ಹುದ್ದೆಗಳಿದ್ದು, ಈ ಪೈಕಿ 4,469 ಹುದ್ದೆಗಳು ಭರ್ತಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಖಾಲಿ ಇರುವ 1,316 ಐಎಎಸ್ ಹುದ್ದೆಗಳ ಪೈಕಿ 794 ನೇರ ನೇಮಕಾತಿ, 522 ಹುದ್ದೆಗಳು ಪದೋನ್ನತಿ ಆಧಾರದ ಮೇಲೆ ಭರ್ತಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

586 ಐಪಿಎಸ್ ಹುದ್ದೆಗಳ ಪೈಕಿ 209 ಹುದ್ದೆಗಳು ನೇರ ನೇಮಕಾತಿ, 377 ಹುದ್ದೆಗಳನ್ನು ಪದೋನ್ನತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.

ಭಾರತೀಯ ಅರಣ್ಯ ಸೇವೆಯ(ಐಎಫ್‌ಎಸ್) 3,193 ಹುದ್ದೆಗಳ ಪೈಕಿ 2,151 ಹುದ್ದೆಗಳು ಭರ್ತಿಯಾಗಿವೆ ಎಂದೂ ಮಾಹಿತಿ ನೀಡಿದ್ದಾರೆ. 1,042 ಐಎಫ್‌ಎಸ್ ಹುದ್ದೆಗಳು ಖಾಲಿ ಇದ್ದು, 503 ನೇರ ನೇಮಕಾತಿ ಮತ್ತು 539 ಪದೋನ್ನತಿ ಮೂಲಕ ಭರ್ತಿಯಾಗಬೇಕಿದೆ.

ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆಗಳ ಮೂಲಕ ಪ್ರತಿ ವರ್ಷ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ಮೀಸಲಾತಿ ಅನ್ವಯ ಕಳೆದ ಐದು ವರ್ಷಗಳಲ್ಲಿ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ನೇಮಕಾತಿಗಳ ಮಾಹಿತಿಯನ್ನೂ ಅವರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.