ADVERTISEMENT

ಮಣಿಪುರ ಹಿಂಸಾಚಾರ: 14 ಸಾವಿರಕ್ಕೂ ಹೆಚ್ಚು ಶಾಲಾಮಕ್ಕಳ ಸ್ಥಳಾಂತರ

ಪಿಟಿಐ
Published 2 ಆಗಸ್ಟ್ 2023, 14:47 IST
Last Updated 2 ಆಗಸ್ಟ್ 2023, 14:47 IST
   

ನವದೆಹಲಿ: ‘ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ 14 ಸಾವಿರಕ್ಕೂ ಹೆಚ್ಚು ಶಾಲಾಮಕ್ಕಳನ್ನು ಸ್ಥಳಾಂತರಿಸಲಾಗಿದೆ’ ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ರಾಜ್ಯಸಭೆಯಲ್ಲಿ ಬುಧವಾರ ತಿಳಸಿದರು.

‘ಪ್ರಸ್ತುತದ ಸಂದರ್ಭದಲ್ಲಿ ಒಟ್ಟು 14,763 ಶಾಲಾ ಮಕ್ಕಳನ್ನು ಸ್ಥಳಾಂತರ ಮಾಡಲಾಗಿದೆ. ಈ ಪೈಕಿ ಶೇಕಡಾ 93.5ರಷ್ಟು ವಿದ್ಯಾರ್ಥಿಗಳಿಗೆ ಹತ್ತಿರದ ಶಾಲೆಗಳಲ್ಲಿ ಉಚಿತವಾಗಿ ಪ್ರವೇಶಾತಿ ನೀಡಲಾಗಿದೆ. ಸ್ಥಳಾಂತರಗೊಂಡ ಇತರ ಮಕ್ಕಳು ಶಾಲಾ ಪ್ರವೇಶಾತಿ ಪಡೆಯಲು ಅನುಕೂಲವಾಗಲೆಂಬ ಉದ್ದೇಶದಿಂದ ಪ್ರತಿ ನಿರಾಶ್ರಿತ ಶಿಬಿರಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಲಿಖಿತ ಉತ್ತರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT