ADVERTISEMENT

ಮಧ್ಯ ಪ್ರದೇಶ: ಕಲ್ಲು ಹೊಡೆಯುವ ಹಬ್ಬದಲ್ಲಿ 200ಕ್ಕೂ ಹೆಚ್ಚು ಮಂದಿಗೆ ಗಾಯ

ಐಎಎನ್ಎಸ್
Published 28 ಆಗಸ್ಟ್ 2022, 7:14 IST
Last Updated 28 ಆಗಸ್ಟ್ 2022, 7:14 IST
ಮಧ್ಯಪ್ರದೇಶದಲ್ಲಿ ಕಲ್ಲು ಹೊಡೆಯುವ ಹಬ್ಬ
ಮಧ್ಯಪ್ರದೇಶದಲ್ಲಿ ಕಲ್ಲು ಹೊಡೆಯುವ ಹಬ್ಬ   

ಚಿಂದ್‌ವಾರ: ಮಧ್ಯಪ್ರದೇಶದ ಚಿಂದ್‌ವಾರ ಜಿಲ್ಲೆಯಲ್ಲಿ ಜಾಮ್ ನದಿ ತಟದಲ್ಲಿ ಎರಡು ಗ್ರಾಮಗಳ ನಿವಾಸಿಗಳ ಮಧ್ಯೆ ಶತಮಾನಕ್ಕೂ ಹಳೆಯದಾದ ಸಂಪ್ರದಾಯದಂತೆ ಆಚರಿಸಲಾಗುತ್ತಿರುವ ಪರಸ್ಪರ ಕಲ್ಲು ಹೊಡೆಯುವ ಹಬ್ಬದಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಪೈಕಿ ಆರು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.

'ಗೋಟ್‌ಮಾರ್' ಎಂದು ಕರೆಯಲ್ಪಡುವ ಹಬ್ಬವುವರ್ಷಂಪ್ರತಿ ನಡೆಯುತ್ತಿದ್ದು, ನೂರಾರು ಮಂದಿ ಕಲ್ಲು ತೂರಾಟದಲ್ಲಿ ಭಾಗವಹಿಸುತ್ತಾರೆ.

ಹಿಂದಿ ಮಾಸ ಭಾದ್ರಪದ 15ನೇ ದಿನದಂದು (ಶನಿಚಾರಿ ಅಮಾವಾಸ್ಯೆ) ಕಲ್ಲು ತೂರಾಟ ಹಬ್ಬ ನಡೆಯುತ್ತದೆ. ಜಾಮ್ ನದಿಯ ಉಭಯ ತಟದಲ್ಲಿರುವ ಹಳ್ಳಿಗಳ ನಿವಾಸಿಗಳು ಈ ಆಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಪೊಲೀಸರ ಉಪಸ್ಥಿತಿಯಿದ್ದರೂ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುತ್ತಿಲ್ಲ. ಸ್ಥಳೀಯಾಡಳಿತದಿಂದ ಸಾರ್ವಜನಿಕ ರಜೆ ಘೋಷಿಸಲಾಗುತ್ತದೆ. ಮದ್ಯಮಾರಾಟ ನಿಷೇಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.