ಶಬರಿಮಲೆ
ತಿರುವನಂತಪುರ: ಪ್ರಸಿದ್ಧ ಧಾರ್ಮಿಕ ಸ್ಥಳ ಶಬರಿಮಲೆಗೆ ಡಿಸೆಂಬರ್ 14ರವರೆಗಿನ ಕಳೆದ 29 ದಿನಗಳಲ್ಲಿ ಒಟ್ಟು 22 ಲಕ್ಷ ಅಯ್ಯಪ್ಪ ಸ್ವಾಮಿ ಭಕ್ತರು ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 4.51 ಲಕ್ಷ ಅಧಿಕ ಭಕ್ತರು ಭೇಟಿ ನೀಡಿದ್ದಾರೆ.
ತಿರುವಾಂಕೂರು ದೇವಸ್ಥಾನ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ‘ದೇವಸ್ಥಾನದ ವರಮಾನ ಈ ವರ್ಷ ಕಳೆದ ಸಾಲಿಗೆ ಹೋಲಿಸಿದರೆ ₹ 22.76 ಕೋಟಿ ಹೆಚ್ಚಾಗಿದೆ’ ಎಂದು ತಿಳಿಸಿದರು.
ಕಳೆದ 29 ದಿನಗಳಲ್ಲಿ ಒಟ್ಟು 22,67,956 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಒಟ್ಟು ₹ 163.89 ಕೋಟಿ ವರಮಾನ ಬಂದಿದೆ. ಈ ಪೈಕಿ ಅರವಣ (ಪ್ರಸಾದ) ಮಾರಾಟದಿಂದಲೇ ₹ 82.67ಕೋಟಿ ವರಮಾನ ಬಂದಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.