ADVERTISEMENT

ಜಮ್ಮು& ಕಾಶ್ಮೀರ: ಉದ್ಯೋಗ ಪೋರ್ಟಲ್‌ನಲ್ಲಿ 3.70 ಲಕ್ಷ ನಿರುದ್ಯೋಗಿ ಯುವಕರ ನೋಂದಣಿ

ಪಿಟಿಐ
Published 10 ಮಾರ್ಚ್ 2025, 12:20 IST
Last Updated 10 ಮಾರ್ಚ್ 2025, 12:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ 2025ರ ಜನವರಿ ಅಂತ್ಯಕ್ಕೆ ಸುಮಾರು 3.70 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಉದ್ಯೋಗ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಸರ್ಕಾರ ಇಂದು (ಸೋಮವಾರ) ತಿಳಿಸಿದೆ.

ನೋಂದಾಯಿತ ಯುವಕರಲ್ಲಿ 1.13 ಲಕ್ಷ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಸೇರಿದ್ದಾರೆ ಎಂದು ಅದು ಹೇಳಿದೆ.

ADVERTISEMENT

ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ, ‘2025ರ ಜನವರಿ ಹೊತ್ತಿಗೆ ಒಟ್ಟು 3,70,811 ನಿರುದ್ಯೋಗಿ ಯುವಕರು ಉದ್ಯೋಗ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಮಿಷನ್‌ ಯುವ ಯೋಜನೆ ಅಡಿಯಲ್ಲಿ, ರಚನಾತ್ಮಕ ವಿಧಾನದ ಮೂಲಕ ಸಂಭಾವ್ಯ ಉದ್ಯಮಿಗಳನ್ನು ಬೆಂಬಲಿಸುವ ಮತ್ತು ಸಬಲೀಕರಣಗೊಳಿಸುವ ಮೂಲಕ ಯುವಕರಲ್ಲಿ ಉದ್ಯಮಶೀಲ ಮನೋಭಾವ ಮತ್ತು ಸ್ವಾವಲಂಬನೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ 1.37 ಲಕ್ಷಕ್ಕೂ ಹೆಚ್ಚು ಹೊಸ ಉದ್ಯಮಗಳು ಮತ್ತು 4.25 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.