ADVERTISEMENT

ಇದುವರೆಗೆ 50 ಕೋಟಿಗೂ ಹೆಚ್ಚು ಕೋವಿಡ್‌ ಪರೀಕ್ಷೆ: ಐಸಿಎಂಆರ್‌

ಪಿಟಿಐ
Published 19 ಆಗಸ್ಟ್ 2021, 8:58 IST
Last Updated 19 ಆಗಸ್ಟ್ 2021, 8:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ ಇದುವರೆಗೆ50 ಕೋಟಿಗೂ ಹೆಚ್ಚು ಕೋವಿಡ್‌–19 ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಗುರುವಾರ ಹೇಳಿದೆ.

‘ಈ ತಿಂಗಳ ಸರಾಸರಿ ದೈನಂದಿನ ಪರೀಕ್ಷೆಗಳ ಸಂಖ್ಯೆಯು 17 ಲಕ್ಷಕ್ಕಿಂತ ಹೆಚ್ಚಿದೆ. ದೇಶದಲ್ಲಿ 55 ದಿನಗಳಲ್ಲಿ 10 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ವರ್ಷ ಜುಲೈ 21ರ ತನಕ 45 ಕೋಟಿ ಪರೀಕ್ಷೆಗಳನ್ನು ಕೈಗೊಳ್ಳಲಾಗಿತ್ತು. ಆಗಸ್ಟ್‌ 18ರ ವೇಳೆಗೆ ಈ ಸಂಖ್ಯೆಯು 50 ಕೋಟಿ ದಾಟಿದೆ’ ಎಂದು ಐಸಿಎಂಆರ್‌ ತಿಳಿಸಿದೆ.

‘ದೇಶದಲ್ಲಿ ಈವರೆಗೆ 50,03,00,840 ಕೋವಿಡ್‌ ಪರೀಕ್ಷೆಗಳನ್ನು ಕೈಗೊಳ್ಳಲಾಗಿವೆ. ಐಸಿಎಂಆರ್‌ಸಿ ಕೋವಿಡ್‌–19 ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ವಿಸ್ತರಿಸುತ್ತಿದೆ. ತಂತ್ರಜ್ಞಾನದ ಸದುಪಯೋಗ ಮತ್ತು ಕೈಗೆಟಕುವ ದರದ ಡಯಾಗ್ನೋಸ್ಟಿಕ್‌ ಕಿಟ್‌ಗಳಲ್ಲಿ ನಾವೀನ್ಯತೆ ತರುವ ಮೂಲಕ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ’ ಎಂದು ಸಂಸ್ಥೆ ಮಾಹಿತಿ ನೀಡಿದೆ.

ADVERTISEMENT

‘ಕೋವಿಡ್‌ ಪರೀಕ್ಷೆಗಳ ಹೆಚ್ಚಳವು ಸೋಂಕು ಪತ್ತೆ, ಪ್ರತ್ಯೇಕ ವಾಸ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ನೆರವಾಗಿದೆ’ ಎಂದು ಐಸಿಎಂಆರ್‌ಪ್ರಧಾನ ನಿರ್ದೇಶಕ ಬಲರಾಮ್‌ ಭಾರ್ಗವ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.