ADVERTISEMENT

ಅಸ್ಸಾಂ: 12 ವರ್ಷದಲ್ಲಿ 5000ಕ್ಕೂ ಹೆಚ್ಚು ಉಗ್ರರ ಬಂಧನ

ಒಬ್ಬ ಮಾತ್ರ ದೋಷಿ ಎಂದು ಪ್ರಕಟ

ಪಿಟಿಐ
Published 25 ಸೆಪ್ಟೆಂಬರ್ 2022, 14:12 IST
Last Updated 25 ಸೆಪ್ಟೆಂಬರ್ 2022, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ (ಪಿಟಿಐ): ಕಳೆದ 12 ವರ್ಷಗಳಲ್ಲಿ ಅಸ್ಸಾಂನ ವಿವಿಧ ಭಾಗಗಳಲ್ಲಿ ಒಟ್ಟು 5,202 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಆದರೆ ಈ ‍ಪೈಕಿ ಒಬ್ಬನನ್ನು ಮಾತ್ರ ದೋಷಿ ಎಂದು ತೀರ್ಮಾನಿಸಲಾಗಿದೆ ಎಂದು ಅಧಿಕೃತ ದಾಖಲೆಗಳು ತಿಳಿಸಿವೆ.

ಬಂಧಿತರ ಪೈಕಿ ಕೇವಲ ಅರ್ಧದಷ್ಟು ಅಂದರೆ 2,606 ಮಂದಿ ವಿರುದ್ಧ ಮಾತ್ರ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.ಬಹುತೇಕ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಎಂದು ತಿಳಿಸಿದೆ.

ವಿವಿಧ ಹಂತಗಳಲ್ಲಿ ತನಿಖಾಧಿಕಾರಿಗಳು ಮತ್ತು ಕಾನೂನು ವ್ಯವಸ್ಥೆಯಲ್ಲಿರುವ ದೋಷವೇ ಈ ವಿಳಂಬಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.