ADVERTISEMENT

ಚಂಡೀಗಡ: 60 ಕೆ.ಜಿ ಹೆರಾಯಿನ್‌ ವಶಕ್ಕೆ

ಪಿಟಿಐ
Published 30 ಜೂನ್ 2025, 14:18 IST
Last Updated 30 ಜೂನ್ 2025, 14:18 IST
<div class="paragraphs"><p>ಹೆರಾಯಿನ್ (ಸಾಂದರ್ಭಿಕ ಚಿತ್ರ)</p></div>

ಹೆರಾಯಿನ್ (ಸಾಂದರ್ಭಿಕ ಚಿತ್ರ)

   

ಕಡತ ಚಿತ್ರ

ಚಂಡೀಗಡ: ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿರುವ  ಬಿಎಸ್‌ಎಫ್‌ ಮತ್ತು ರಾಜಸ್ತಾನ ಪೊಲೀಸರು ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ, ಬಾರ್ಮರ್‌ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಸಮೀಪ 60 ಕೆ.ಜಿಯಷ್ಟು ಹೆರಾಯಿನ್‌ ವಶಕ್ಕೆ ಪಡೆದಿದ್ದಾರೆ. 

ADVERTISEMENT

‘ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರ ತನ್ವೀರ್‌ ಶಾ, ಕೆನಡಾದ ಜೋಬನ್‌ ಕಾಲರ್‌ ಈ ಜಾಲದ ಹಿಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪಂಜಾಬ್‌, ಹರಿಯಾಣ, ರಾಜಸ್ತಾನ ಮತ್ತು ಜಮ್ಮು ಮತ್ತು ಕಾಶ್ಮೀರದ 9 ಮಂದಿಯನ್ನು ಬಂಧಿಸಲಾಗಿದೆ’ ಎಂದು ರಾಜಸ್ತಾನದ ಡಿಜಿಪಿ ಗೌರವ್‌ ಯಾದವ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.