ADVERTISEMENT

ದೇಶ ವಿರೋಧಿ, ಸುಳ್ಳು ಸುದ್ದಿ ಪ್ರಸಾರ: 60 ಖಾತೆಗಳ ನಿಷ್ಕ್ರಿಯ

ಮೇಲ್ಮನೆಯಲ್ಲಿ ಪ್ರಸಾರ ಸಚಿವ ಎಲ್‌.ಮುರುಗನ್‌ ಮಾಹಿತಿ

ಪಿಟಿಐ
Published 10 ಫೆಬ್ರುವರಿ 2022, 12:30 IST
Last Updated 10 ಫೆಬ್ರುವರಿ 2022, 12:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಳೆದೆರಡು ತಿಂಗಳಲ್ಲಿ ದೇಶ ವಿರೋಧಿ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 60ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್‌ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

ಮೇಲ್ಮನೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್‌.ಮುರುಗನ್‌, ಸರ್ಕಾರ ಜನರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಆದರೆ ದೇಶ ವಿರೋಧಿ ಮತ್ತು ಸುಳ್ಳು ಸುದ್ದಿ ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಫೇಸ್‌ಬುಕ್‌, ಟ್ವಿಟರ್‌, ಇನ್ಸ್ಟಾಗ್ರಾಮ್‌ ಹಾಗೂಪಾಕಿಸ್ತಾನದಪ್ರಾಯೋಜಿತ ಯೂಟ್ಯೂಬ್‌ ಸೇರಿ 60 ಖಾತೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ಸುಳ್ಳು ಸುದ್ದಿ ಹರಡುವ ಟೆಕ್‌ಫಾಗ್‌ ಆ್ಯಪ್‌ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುರುಗನ್‌, ಸರಕಾರವು ವಾಸ್ತವ ಪರಿಶೀಲನೆ (ಫ್ಯಾಕ್ಟ್ ಚೆಕ್‌) ಘಟನೆ ಸ್ಥಾಪಿಸಿ, ಸುಳ್ಳು ಸುದ್ದಿಗಳ ಮೇಲೆ ನಿಗಾವಹಿಸಿದೆ. ವೈರಲ್‌ ಆಗುವ ಸುದ್ದಿಗಳ ಸತ್ಯಾಂಶ ಪರಿಶೀಲನೆನಡೆಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕಳೆದ ತಿಂಗಳಲ್ಲಿ ಕೇಂದ್ರ ಸರಕಾರ ಭಾರತ ವಿರೋಧಿಯಾಗಿ ಸುದ್ದಿ ಪ್ರಸಾರ ಮಾಡಲಾಗುತ್ತಿದ್ದ 35 ಯ್ಯೂಟೂಬ್‌ ಚಾನಲ್‌, ಎರಡು ಟ್ವಿಟರ್‌ ಖಾತೆ ಮತ್ತು ಇನ್ಸ್ಟಾಗ್ರಾಮ್‌ ಮತ್ತು ಒಂದು ಫೇಸ್‌ಬುಕ್‌ ಖಾತೆಯನ್ನು ನಿಷ್ಕ್ರಿಯಗೊಳಿಸಿತ್ತು. ಡಿಸೆಂಬರ್‌ನಲ್ಲಿ 20 ಯೂಟ್ಯೂಬ್‌ ವಾಹಿನಿ ಮತ್ತು ಎರಡು ವೆಬ್‌ಸೈಟ್‌ ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.