ADVERTISEMENT

ಹಿಮಾಚಲ ಪ್ರದೇಶದ 6 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮಕ್ಕಳು

ಪಿಟಿಐ
Published 24 ನವೆಂಬರ್ 2022, 9:36 IST
Last Updated 24 ನವೆಂಬರ್ 2022, 9:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಿಮ್ಲಾ:ಹಿಮಾಚಲ ಪ್ರದೇಶದಲ್ಲಿರುವ 5,113 ಪ್ರಾಥಮಿಕ ಹಾಗೂ 993 ಮಾಧ್ಯಮಿಕ ಶಾಲೆಗಳು ಸೇರಿ ಒಟ್ಟು 6,106 ಸರ್ಕಾರಿ ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮಕ್ಕಳು ಕಲಿಯುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.

ರಾಜ್ಯದಲ್ಲಿರುವ4,478ಪ್ರಾಥಮಿಕ ಮತ್ತು 895 ಮಾಧ್ಯಮಿಕ ಶಾಲೆಗಳಲ್ಲಿ21-60 ಮಕ್ಕಳು, 681 ಪ್ರಾಥಮಿಕ ಮತ್ತು 993 ಮಾಧ್ಯಮಿಕ ಶಾಲೆಗಳಲ್ಲಿ 61–100 ಮಕ್ಕಳು ಇದ್ದಾರೆ ಎಂದು 'ಶಿಕ್ಷಣಕ್ಕಾಗಿನ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ' ವರದಿ ಉಲ್ಲೇಖಿಸಿದೆ.

ವರದಿ ಪ್ರಕಾರ,ರಾಜ್ಯದಲ್ಲಿ ಒಟ್ಟು 18,028 ಶಾಲೆಗಳಿವೆ. ಈ ಪೈಕಿ 15,313 ಸರ್ಕಾರಿ ಶಾಲೆಗಳಾಗಿವೆ. 39,906 ಪುರುಷರು ಮತ್ತು 26,257 ಮಂದಿ ಮಹಿಳೆಯರು ಸೇರಿ ಒಟ್ಟು65,973 ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, 12 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. 2,969 ಶಾಲೆಗಳಲ್ಲಿ ಒಬ್ಬರು,5,533 ಶಾಲೆಗಳಲ್ಲಿ ಇಬ್ಬರು ಮತ್ತು1,779 ಶಾಲೆಗಳಲ್ಲಿ ಮೂವರು ಶಿಕ್ಷಕರು ಇದ್ದಾರೆ.

ADVERTISEMENT

ಅದೇ ರೀತಿ, 51 ಮಾಧ್ಯಮಿಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. 416 ಶಾಲೆಗಳಲ್ಲಿ ಇಬ್ಬರು, 773 ಶಾಲೆಗಳಲ್ಲಿ ಮೂವರು ಮತ್ತು 701 ಶಾಲೆಗಳಲ್ಲಿ 4 ರಿಂದ ಆರು ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.