ADVERTISEMENT

ಮಲಗುಂಡಿ ಸ್ವಚ್ಛತಾ ವೃತ್ತಿ: ಜಾತಿ ಆಧಾರಿತವಲ್ಲ: ಕೇಂದ್ರ

ಎಸ್‌ಸಿ ಸಮುದಾಯದ ಕಾರ್ಮಿಕರೇ ಅಧಿಕ; ಸಾಮಾನ್ಯ ವರ್ಗದವರು ಅತ್ಯಂತ ಕಡಿಮೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 0:34 IST
Last Updated 18 ಡಿಸೆಂಬರ್ 2024, 0:34 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಭಾರತದಲ್ಲಿರುವ ಒಟ್ಟು ಮಲಗುಂಡಿ ಸ್ವಚ್ಛತಾ ಕಾರ್ಮಿಕರ ಪೈಕಿ ಪರಿಶಿಷ್ಟ ಜಾತಿಗೆ ಸೇರಿದವರೇ ಶೇ 67ರಷ್ಟಿದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದವರು ಅತ್ಯಂತ ಕಡಿಮೆ ಅಂದರೆ, ಶೇ 8.05ರಷ್ಟಿದ್ದಾರೆ.

‘ಮಲಗುಂಡಿ ಸ್ವಚ್ಛತಾ ಕಾರ್ಮಿಕರ ಒಟ್ಟು ಸಂಖ್ಯೆಯಷ್ಟು? ಕಾರ್ಮಿಕರ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರೇ ಅಧಿಕ ಸಂಖ್ಯೆಯಲ್ಲಿದ್ದಾರೆಯೇ? ಒಂದು ವೇಳೆ ಈ ಸಮುದಾಯಗಳೇ ಅಧಿಕ ಸಂಖ್ಯೆಯಲ್ಲಿದ್ದರೆ, ಬೇರೆ ಬೇರೆ ಸಮುದಾಯವರೂ ಈ ವೃತ್ತಿ ಕೈಗೆತ್ತಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆಯೇ?’ ಎಂಬ ಪ್ರಶ್ನೆಗಳನ್ನು ರಾಜಸ್ಥಾನದ ಕಾಂಗ್ರೆಸ್‌ ಸಂಸದ ಕುಲ್‌ದೀಪ್‌ ಇಂದೋರ್‌ ಅವರು ಲೋಕಸಭೆಯಲ್ಲಿ ಕೇಳಿದರು.

ಇದಕ್ಕೆ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಇಲಾಖೆಯು ಲೋಕಸಭೆಗೆ ಮಂಗಳವಾರ ಉತ್ತರ ನೀಡಿದೆ.

ADVERTISEMENT
ಮಲಗುಂಡಿ ಸ್ವಚ್ಛತಾ ಚಟುವಟಿಕೆಯು ಜಾತಿ ಆಧಾರಿತವಾಗಿಲ್ಲ. ಬದಲಿಗೆ ಇದೊಂದು ವೃತ್ತಿ ಆಧಾರಿತವಾಗಿದೆ.
–ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಇಲಾಖೆ
57,758: ದೇಶದಲ್ಲಿರುವ ಮಲಗುಂಡಿ ಸ್ವಚ್ಛತಾ ಕಾರ್ಮಿಕರ ಒಟ್ಟು ಸಂಖ್ಯೆ
54,57 4:ಒಟ್ಟು ಕಾರ್ಮಿಕರ ಪೈಕಿ ಕೇಂದ್ರ ಸರ್ಕಾರವು ಪ್ರೊಫೈಲ್‌ ಸಿದ್ಧಪಡಿಸಿರುವ ಕಾರ್ಮಿಕರ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.