ADVERTISEMENT

ನ್ಯಾಯಾಲಯದಲ್ಲಿ ಜನಸಂದಣಿ: ವಿಚಲಿತರಾದ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ

ಪಿಟಿಐ
Published 1 ಮಾರ್ಚ್ 2021, 11:57 IST
Last Updated 1 ಮಾರ್ಚ್ 2021, 11:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ನ್ಯಾಯಾಲಯದ ಕೊಠಡಿಯಲ್ಲಿ ಸೋಮವಾರ ಕಿಕ್ಕಿರಿದ ಜನಸಂದಣಿ ನೋಡಿ ಕೆಂಡಾಮಂಡಲರಾದ ಬಾಂಬೆ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿಯೊಬ್ಬರು, ಅಂತರ ಕಾಯ್ದುಕೊಳ್ಳದಿದ್ದರೆ ಯಾವುದೇ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.

ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಮೂರ್ತಿ ಎಸ್‌.ಎಸ್‌. ಶಿಂಧೆ ನೇತೃತ್ವದ ವಿಭಾಗೀಯ ಪೀಠವು, ನ್ಯಾಯಾಲಯದ ಕೊಠಡಿಯಲ್ಲಿ ಜನಸಂದಣಿಯನ್ನು ನೋಡಿ ಈ ಎಚ್ಚರಿಕೆ ನೀಡಿತು.

ಮಹಾರಾಷ್ಟ್ರ ಜಿಲ್ಲೆಯ ಅಮರಾವತಿ ಜಿಲ್ಲೆಯಲ್ಲಿ 60 ಮಂದಿ ವಕೀಲರಿಗೆ ಕೋವಿಡ್‌ 19 ದೃಢಪಟ್ಟಿರುವ ಪ್ರಕರಣ ಉಲ್ಲೇಖಿಸಿದ ನ್ಯಾಯಮೂರ್ತಿ ಶಿಂಧೆ,‘ನಾವು (ನ್ಯಾಯಾಧೀಶರು) ಸ್ವಲ್ಪ ದೂರದಲ್ಲಿ ಕುಳಿತಿದ್ದೇವೆ. ಎಸ್‌ಒಪಿ ಮತ್ತು ಅಂತರ ಪಾಲನೆಯು ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಗಾಗಿ ಮಾಡಿರುವುದಾಗಿದೆ. ಅದನ್ನು ಸರಿಯಾಗಿ ಪಾಲಿಸಿ’ ಎಂದು ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.