ADVERTISEMENT

ಏರ್‌ ಇಂಡಿಯಾ ವಿಮಾನ ಖರೀದಿ ಒಪ್ಪಂದ: ಚಿದಂಬರಂಗೆ ಜಾರಿ ನಿರ್ದೇಶನಾಲಯ ಸಮನ್ಸ್‌

ಅವ್ಯವಹಾರದ ಆರೋಪ

ಏಜೆನ್ಸೀಸ್
Published 19 ಆಗಸ್ಟ್ 2019, 11:27 IST
Last Updated 19 ಆಗಸ್ಟ್ 2019, 11:27 IST
   

ನವದೆಹಲಿ:ಯುಪಿಎ ಸರ್ಕಾರದ ಅವಧಿಯಲ್ಲಿ ಏರ್‌ ಇಂಡಿಯಾ ಸಂಸ್ಥೆಗೆ ವಿಮಾನ ಖರೀದಿಸಿದ ಒಪ್ಪಂದಕ್ಕೆ ಸಂಬಂದಿಸಿ ಇದೇ 23ರಂದು ವಿಚಾರಣೆಗೆ ಹಾಜರಾಗುವಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸೂಚಿಸಿದೆ. ದಶಕದ ಹಿಂದಿನ ಈ ಒಪ್ಪಂದವು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಏರ್‌ ಇಂಡಿಯಾಗೆ ಮತ್ತಷ್ಟು ನಷ್ಟ ಉಂಟು ಮಾಡಿತ್ತು ಎಂದು ತನಿಖಾ ಸಂಸ್ಥೆಗಳು ಹೇಳಿವೆ.

ಏರ್‌ ಇಂಡಿಯಾಗೆ 111 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಚಿದಂಬರಂ ನೇತೃತ್ವದ ಸಚಿವರ ಸಮಿತಿ ಅನುಮೋದನೆ ನೀಡಿತ್ತು. ಸುಮಾರು ₹70 ಸಾವಿರ ಕೋಟಿ ವೆಚ್ಚದಲ್ಲಿ ಏರ್‌ಬಸ್‌ನಿಂದ 43 ಮತ್ತು ಬೋಯಿಂಗ್‌ನಿಂದ 68 ವಿಮಾನ ಖರೀದಿಸುವ ಒಪ್ಪಂದ ಇದಾಗಿತ್ತು ಎಂದುಎನ್‌ಡಿಟಿವಿವರದಿ ಮಾಡಿದೆ.

ಏರ್‌ ಇಂಡಿಯಾಗೆ ಬೋಯಿಂಗ್‌ನಿಂದ 68 ವಿಮಾನಗಳನ್ನು ಖರೀದಿಸಲು 2005ರ ಡಿಸೆಂಬರ್‌ನಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದಾಗಿ ವರ್ಷದ ನಂತರ ಏರ್‌ಬಸ್‌ನಿಂದ 43 ವಿಮಾನಗಳನ್ನು ಖರೀದಿಸಲು ಇಂಡಿಯನ್‌ ಏರ್‌ಲೈನ್ಸ್‌ ಒಪ್ಪಂದ ಮಾಡಿಕೊಂಡಿತ್ತು. 2007ರಲ್ಲಿ ಏರ್ ಇಂಡಿಯಾ ಜತೆಇಂಡಿಯನ್‌ ಏರ್‌ಲೈನ್ಸ್‌ ವಿಲೀನಗೊಂಡಿತ್ತು. ವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇರೆಗೆ ಸುಪ್ರೀಂ ಕೋರ್ಟ್‌ ಸೂಚನೆಯಂತೆ 2017ರ ಮೇನಲ್ಲಿ ಸಿಬಿಐ ಮೂರು ಪ್ರಕರಣಗಳನ್ನು ದಾಖಲಿಸಿತ್ತು ಎಂದು ವರದಿ ಉಲ್ಲೇಖಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.