
ಅಚ್ಯುತಾನಂದನ್
ತಿರುವನಂತಪುರ: ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರ ಕುಟುಂಬವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿಪಿಎಂನ ಕೇರಳ ರಾಜ್ಯ ಘಟಕ ಹೇಳಿದೆ.
ಅಚ್ಯುತಾನಂದನ್ ಅವರನ್ನು ಮರಣೋತ್ತರವಾಗಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದರಿಂದ ಪ್ರಶಸ್ತಿ ಸ್ವೀಕರಿಸುವ ಬಗ್ಗೆ ಅವರ ಕುಟುಂಬ ನಿರ್ಧರಿಸುತ್ತದೆ ಎಂದು ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೋಮವಾರ ಹೇಳಿದ್ದಾರೆ. ಅವರ ಕುಟುಂಬವು ಪ್ರಶಸ್ತಿ ಸ್ವೀಕರಿಸುವುದರಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಇದೇ ವೇಳೆ, ಅಚ್ಯುತಾನಂದನ್ ಅವರ ಪುತ್ರ ವಿ.ಎ ಅರುಣ್‌ಕುಮಾರ್ ಅವರು, ‘ಪಕ್ಷದ ನಾಯಕತ್ವದ ಜತೆ ಸಮಾಲೋಚನೆ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಭಾನುವಾರ ಅಚ್ಯುತಾನಂದನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಇಂತಹ ಗೌರವ ಸ್ವೀಕರಿಸುವುದು ಸಿಪಿಎಂನ ನಿಲುವಿಗೆ ವಿರುದ್ಧವಾಗಿರುವುದರಿಂದ ಅವರ ಕುಟುಂಬ ಪ್ರಶಸ್ತಿ ಸ್ವೀಕರಿಸುತ್ತದೆಯೇ ಎಂಬ ಚರ್ಚೆಗಳು ನಡೆದಿವೆ.
ಇ.ಎಂ.ಎಸ್ ನಂಬೂದಿರಿಪಾಡ್ ಸೇರಿದಂತೆ ಸಿಪಿಎಂನ ಹಲವು ನಾಯಕರು ಕೇಂದ್ರ ಸರ್ಕಾರ ನೀಡಿದ್ದ ಗೌರವವನ್ನು ಈ ಹಿಂದೆ ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.