
ಪಿಟಿಐ
ಮೆಂಧರ್/ಪೂಂಛ್: ಭಾರತ– ಪಾಕಿಸ್ತಾನ ಗಡಿಯಲ್ಲಿರುವ ಪೂಂಛ್ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ತುಂಬಿದ್ದ ಚೀಲವನ್ನು ಸೇನೆಯ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ರಂಗರ್ ನಲ್ಲಾ ಹಾಗೂ ಪೂಂಛ್ ನದಿ ನಡುವಿನ ಪ್ರದೇಶದಲ್ಲಿ ಮುಂಜಾನೆ ಚೀಲವು ಪತ್ತೆಯಾಗಿದೆ. ಡ್ರೋನ್ ಮೂಲಕ ಈ ಚೀಲವನ್ನು ಇಲ್ಲಿ ಹಾಕಲಾಗಿದೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ತಾರು ಮದ್ದುಗುಂಡುಗಳು, ಹಳದಿ ಟಿಫಿನ್ ಬಾಕ್ಸ್ ಹಾಗೂ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಚೀಲದಲ್ಲಿ ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.