ADVERTISEMENT

PM ಮೋದಿ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಹೋರಾಟಗಾರ: ನಟ ರಜನಿಕಾಂತ್ ಬಣ್ಣನೆ

ಪಿಟಿಐ
Published 1 ಮೇ 2025, 10:52 IST
Last Updated 1 ಮೇ 2025, 10:52 IST
<div class="paragraphs"><p>ರಜನಿಕಾಂತ್</p></div>

ರಜನಿಕಾಂತ್

   

– ಪಿಟಿಐ ಚಿತ್ರ

ಮುಂಬೈ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆ ಅನಾಗರಿಕ ಮತ್ತು ಕ್ರೂರವಾದದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಹೋರಾಟಗಾರರಾಗಿದ್ದಾರೆ ಎಂದು ಹಿರಿಯ ನಟ ರಜನಿಕಾಂತ್ ಹೇಳಿದ್ದಾರೆ.

ADVERTISEMENT

ಮುಂಬೈನಲ್ಲಿ ನಡೆಯುತ್ತಿರುವ ಶ್ರವಣ– ದೃಶ್ಯ ಮನರಂಜನೆ ಶೃಂಗದ (ವೇವ್ಸ್‌) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಅವರು, ಸರ್ಕಾರ ಈ ಕಾರ್ಯಕ್ರಮವನ್ನು ಮುಂದೂಡಲಿದೆ ಎಂದು ಜನರು ಭಾವಿಸಿದ್ದರು. ಆದರೆ ನನಗೆ ಮೋದಿಯವರ ಮೇಲೆ ನಂಬಿಕೆಯಿತ್ತು, ಈ ಕಾರ್ಯಕ್ರಮ ಖಂಡಿತವಾಗಿಯೂ ನಡೆಯಲಿದೆ ಎನ್ನುವ ವಿಶ್ವಾಸವಿತ್ತು’ ಎಂದರು.

‘ಪ್ರಧಾನಿ ಮೋದಿ ಒಬ್ಬ ಹೋರಾಟಗಾರ, ಅವರು ಎಂತಹ ಸವಾಲನ್ನೂ ಎದುರಿಸಬಲ್ಲರು. ಅದನ್ನು ಅವರು ನಿರೂಪಿಸಿದ್ದಾರೆ ಮತ್ತು ನಾವು ಕಳೆದ ಒಂದು ದಶಕಗಳಿಂದ ನೋಡುತ್ತಲೇ ಬಂದಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಅವರು ಧೈರ್ಯದಿಂದ ಮತ್ತು ಅದ್ಭುತವಾಗಿ ನಿಭಾಯಿಸಲಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ನಮ್ಮ ದೇಶಕ್ಕೆ ಕಳೆ ತರಲಿದ್ದಾರೆ’ ಎಂದು ಹೊಗಳಿದರು.

ಕಂಟೆಂಟ್‌ ಸೃಷ್ಟಿಕರ್ತರು, ನವೋದ್ಯಮಗಳು, ಡಿಜಿಟಲ್ ಆವಿಷ್ಕಾರಗಳು, ಉದ್ಯಮದ ದಿಗ್ಗಜರು, ವಿಶ್ವದ ವಿವಿಧೆಡೆಯ ನೀತಿ ನಿರೂಪಕರು... ಎಲ್ಲರನ್ನೂ ಒಂದೇ ಸೂರಿನಡಿ ತಂದು ಸಂವಾದಕ್ಕೆ ಶೃಂಗ ಅವಕಾಶ ಕಲ್ಪಿಸಲಿದೆ. 

ಇಲ್ಲಿ, ಚಲನಚಿತ್ರಗಳು, ಒಟಿಟಿ ವೇದಿಕೆಗಳು, ಗೇಮಿಂಗ್, ಕಾಮಿಕ್ಸ್‌, ಡಿಜಿಟಲ್ ಮಾಧ್ಯಮ, ಹೊಸಕಾಲದ ತಂತ್ರಜ್ಞಾನ ಎಲ್ಲವುಗಳಲ್ಲಿ ಭಾರತದ ಸಾಧನೆಯನ್ನು ಬಿಂಬಿಸಲು ‘ಭಾರತ್ ಪೆವಿಲಿಯನ್’ ಎಂಬ ವೇದಿಕೆಯನ್ನೂ ಒದಗಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.