ADVERTISEMENT

ವೈಷ್ಣೋದೇವಿ ಮಾರ್ಗದಲ್ಲಿ ಕುದುರೆ ಸವಾರಿ ಸೇವೆ ಸೋಗಿನಲ್ಲಿ ಬಂದ ಇಬ್ಬರ ಸೆರೆ

ಪಿಟಿಐ
Published 25 ಏಪ್ರಿಲ್ 2025, 5:43 IST
Last Updated 25 ಏಪ್ರಿಲ್ 2025, 5:43 IST
   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ಮಾರ್ಗದಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಕುದುರೆ ಸವಾರಿ ಸೇವೆ ಒದಗಿಸುವ ಸೋಗಿನಲ್ಲಿ ಓಡಾಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಗೀತಾ ಮಾತಾ ಮಂದಿರದ ಬಳಿ ನಿತ್ಯದ ಗಸ್ತು ತಿರುಗುತ್ತಿದ್ದಾಗ, ಪೊಲೀಸ್ ತಂಡವು ಪೂರನ್ ಸಿಂಗ್ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ತಡೆದು. ಪರಿಶೀಲಿಸಿದ್ದಾರೆ. ಆತನ ನಿಜವಾದ ಹೆಸರು ಮಣಿರ್ ಹುಸೇನ್ ಎಂದು ತಿಳಿದುಬಂದಿದೆ.

ಆತ ಅಕ್ರಮವಾಗಿ ಕಾರ್ಯನಿರ್ವಹಿಸಲು ಬೇರೊಬ್ಬರ ಅಧಿಕೃತ ಸೇವಾ ಕಾರ್ಡ್ ಅನ್ನು ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಕತ್ರಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಾನ್ ಗಂಗಾ ಸೇತುವೆಯ ಬಳಿ ಇದೇ ರೀತಿಯ ಪ್ರಕರಣದಲ್ಲಿ ಕುದುರೆ ಸೇವೆ ಸೋಗಿನಲ್ಲಿ ಓಡಾಡುತ್ತಿದ್ದ ಜಮ್ಮು ಜಿಲ್ಲೆಯ ಕೋಟ್ಲಿಯ ಸಾಹಿಲ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವೈಷ್ಣೋದೇವಿ ದೇವಾಲಯದ ಮಾರ್ಗದಲ್ಲಿ ಅನಧಿಕೃತ ಚಟುವಟಿಕೆಗಳನ್ನು ತಡೆಯಲು ಕಣ್ಗಾವಲು ಮತ್ತು ಪರಿಶೀಲನಾ ಅಭಿಯಾನಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವಿಗೀಡಾದ ಬಳಿಕ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.