ADVERTISEMENT

ದೇಶದ ವಿರುದ್ಧದ ಹೇಳಿಕೆಗಳಿಂದ ನೋವಾಗುತ್ತದೆ: ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಪಿಟಿಐ
Published 20 ಸೆಪ್ಟೆಂಬರ್ 2022, 16:01 IST
Last Updated 20 ಸೆಪ್ಟೆಂಬರ್ 2022, 16:01 IST
ಜಗದೀಪ್‌ ಧನಕರ್‌
ಜಗದೀಪ್‌ ಧನಕರ್‌   

ನವದೆಹಲಿ (ಪಿಟಿಐ): ವಾಸ್ತವಕ್ಕೆ ದೂರವಾಗಿರುವ ಭಾರತದ ವಿರುದ್ಧದ ಹೇಳಿಕೆಗಳನ್ನು ಕೇಳುವಾಗ ತೀರಾ ನೋವಾಗುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಮಂಗಳವಾರ ಹೇಳಿದರು.

ಅಖಿಲ ಭಾರತ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ನ (ಎಐಎಂಎ) 49ನೇ ರಾಷ್ಟ್ರೀಯ ನಿರ್ವಹಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್‌–19 ಸಾಂಕ್ರಾಮಿಕದೊಂದಿಗೆ ಹೋರಾಡುತ್ತಲೇ ಸರ್ಕಾರ ಸಾಧಿಸಿದ ಸಾಧನೆಗಳನ್ನು ಸ್ಮರಿಸಿದರು.

‘ಕೋವಿಡ್‌ ಸಾಂಕ್ರಾಮಿಕ ಭಾರತದ ಶಕ್ತಿ ಏನೆಂದು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿದೆ. ಭಾರತ ಹಿಂದೆಂದೂ ಈಗಿನಂತೆ ಜಾಗತಿಕವಾಗಿ ಗಮನ ಸೆಳೆದಿರಲಿಲ್ಲ. ಭಾರತದ ಪ್ರಧಾನಿ ಹೊಂದಿರುವ ವರ್ಚಸ್ಸು, ವಿದೇಶಾಂಗ ಸಚಿವರ ವರ್ಚಸ್ಸು, ವಿದೇಶದಲ್ಲಿ ಪ್ರತಿಯೊಬ್ಬ ಭಾರತೀಯನ ವರ್ಚಸ್ಸು ವಿಭಿನ್ನವಾಗಿರುವುದು ಹೆಮ್ಮೆಯ ಸಂಗತಿ’ ಎಂದು ಅವರು ಹೇಳಿದರು.

ADVERTISEMENT

ಇದೇ ವೇಳೆ ಹಲವು ಅಡೆತಡೆಗಳ ನಡುವೆಯೂ ಲಸಿಕಾಕರಣಕ್ಕೆ ಉತ್ತೇಜನ ನೀಡುತ್ತಿರುವ ಸರ್ಕಾರದ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.