ADVERTISEMENT

ಗಡಿಯಲ್ಲಿ ಶೆಲ್, ಗುಂಡಿನ ದಾಳಿ

ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ

ಪಿಟಿಐ
Published 28 ಜುಲೈ 2020, 9:31 IST
Last Updated 28 ಜುಲೈ 2020, 9:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ಕಳೆದ ಒಂದು ವಾರದಿಂದ ಹಲವು ಬಾರಿಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಸೈನಿಕರು ಮಂಗಳವಾರ ಪೂಂಚ್‌ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸೈನಿಕರ ಮೇಲೆ ಅಪ್ರಚೋದಿತ ಶೆಲ್ ಮತ್ತು ಗುಂಡಿನ ದಾಳಿ ನಡೆಸಿರುವುದಾಗಿ ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಸತತ ಎಂಟು ದಿನಗಳಿಂದ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನದ ಸೈನಿಕರು ಮಂಗಳವಾರ ಪೂಂಚ್‌ ಜಿಲ್ಲೆಯ ಡೇಗ್ವಾರ್ ಮತ್ತು ಕ್ವಾಸ್ಟಾ ಸೆಕ್ಟರ್‌ ಬಳಿಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಸೈನಿಕರ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿದರು. ನಮ್ಮ ಸೈನಿಕರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ, ಈ ಒಂದು ವಾರದಲ್ಲಿ ಪಾಕಿಸ್ತಾನ ಸೈನಿಕರುಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಎರಡು ಸೆಕ್ಟರ್‌ನ ಏಳೆಂಟು ಹಳ್ಳಿಗಳ ಮೇಲೆ 20 ಕ್ಕೂ ಹೆಚ್ಚು ಬಾರಿ ’ಕದನ ವಿರಾಮ ಉಲ್ಲಂಘಿಸಿ’ ಅಪ್ರಚೋದಿತ ಶೆಲ್ ಮತ್ತು ಗುಂಡಿನ ದಾಳಿಗಳನ್ನು ನಡೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.