ADVERTISEMENT

ಭಾರತದೊಳಗೆ ನುಸುಳಿದ ಪಾಕ್‌ ಮೀನುಗಾರನ ಬಂಧನ

ಪಿಟಿಐ
Published 20 ಡಿಸೆಂಬರ್ 2020, 7:41 IST
Last Updated 20 ಡಿಸೆಂಬರ್ 2020, 7:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಗುಜರಾತಿನ ಕರಾವಳಿ ಭಾಗದ ಮೂಲಕ ಭಾರತ ಪ್ರವೇಶಿಸಿದ ಪಾಕಿಸ್ತಾನದ ಮೀನುಗಾರನೊಬ್ಬನನ್ನು ಬಂಧಿಸಲಾಗಿದ್ದು, ಆತನ ದೋಣಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಗಡಿ ಭದ್ರಾತಾ ಪಡೆ ಭಾನುವಾರ ತಿಳಿಸಿದೆ.

ಗುಜರಾತಿನ ಕರಾವಳಿ ಪ್ರದೇಶದ ಬಳಿ ಅಧಿಕಾರಿಗಳು ಶನಿವಾರ ಸಂಜೆ ಗಸ್ತು ಹಾಕುತ್ತಿದ್ದ ವೇಳೆ ಸರ್ ಕ್ರೀಕ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ಮೀನುಗಾರನನ್ನು ಬಂಧಿಸಲಾಗಿದೆ. ಆತನನ್ನು ಸಿಂಧ್‌ ಪ್ರಾಂತ್ಯದ ನಿವಾಸಿ ಖಲೀದ್‌ ಹುಸೇನ್‌ ಎಂದು ಗುರುತಿಸಲಾಗಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ.

ಈ ವೇಳೆ ಆತನ ಬೋಟ್, 20 ಲೀಟರ್ ಡಿಸೇಲ್‌, ಮೊಬೈಲ್ ಫೋನ್, ಮೀನು ಹಿಡಿಯುವ ಎರಡು ಬಲೆ, 8 ಪ್ಲಾಸ್ಟಿಕ್ ನೂಲು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಬಿಎಸ್ಎಫ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈವರೆಗೂ ಯಾವುದೇ ಸಂಶಯಾಸ್ಪದ ಚಟುವಟಿಕೆ ಗಮನಕ್ಕೆ ಬಂದಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.