ADVERTISEMENT

ಸೇನಾ ಮುಖ್ಯಸ್ಥರ ನೇಮಕ: ಇಮ್ರಾನ್ ಖಾನ್ ಸಲಹೆ ತಿರಸ್ಕೃತ

ಪಿಟಿಐ
Published 30 ಅಕ್ಟೋಬರ್ 2022, 14:36 IST
Last Updated 30 ಅಕ್ಟೋಬರ್ 2022, 14:36 IST
ಶೆಹಬಾಜ್‌ ಷರೀಫ್‌
ಶೆಹಬಾಜ್‌ ಷರೀಫ್‌   

ಇಸ್ಲಾಮಾಬಾದ್‌: ಸೇನಾ ಮುಖ್ಯಸ್ಥರ ನೇಮಕ ಸಂಬಂಧ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಅವರ ಶಿಫಾರಸನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ತಿಳಿಸಿದ್ದಾರೆ.

‘ಸೇನಾ ಮುಖ್ಯಸ್ಥರ ನೇಮಕ ಸಂವಿಧಾನಾತ್ಮಕ ಕರ್ತವ್ಯ, ಅದನ್ನು ಪ್ರಧಾನಮಂತ್ರಿಗಳೇ ಮಾಡಬೇಕು ಎಂದು ಪ್ರಸ್ತಾಪವನ್ನು ತಿರಸ್ಕರಿಸಲಾಯಿತು’ ಎಂದುಶೆಹಬಾಜ್‌ ತಿಳಿಸಿದರು.

2016ರಲ್ಲಿ ನೇಮಕವಾಗಿದ್ದಸೇನಾ ಮುಖ್ಯಸ್ಥ ಜನರಲ್‌ ಖಮಾರ್‌ ಜಾವೇದ್‌ ಬಜ್ವಾ ಅವರ ಆಡಳಿತಾವಧಿಯನ್ನು ನಿವೃತ್ತಿ ನಂತರವೂ ಮೂರು ವರ್ಷ ವಿಸ್ತರಿಸಲಾಗಿತ್ತು. ಆ ಅವಧಿಯು ನ.29ರಂದು ಅಂತ್ಯಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.