ADVERTISEMENT

ಪಾಕ್‌ನಿಂದ ಷೆಲ್‌ ದಾಳಿ

Pak troops shells

ಪಿಟಿಐ
Published 5 ಏಪ್ರಿಲ್ 2019, 18:30 IST
Last Updated 5 ಏಪ್ರಿಲ್ 2019, 18:30 IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆಯ ರಜೌರಿ ಮತ್ತು ಪೂಂಛ್‌ ಜಿಲ್ಲೆಯಲ್ಲಿ ಪಾಕಿಸ್ತಾನ ಶುಕ್ರವಾರ ಷೆಲ್‌ ದಾಳಿ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.

‘ಮಧ್ಯಾಹ್ನ 2.40 ರ ಸುಮಾರಿಗೆ ಪಾಕಿಸ್ತಾನದ ಯೋಧರು ಅಪ್ರಚೋದಿತ ದಾಳಿ ನಡೆಸಿದರು. ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆದಿದೆ’ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನದ ದಾಳಿ ಭಾರತದ ಪಡೆಗಳೂ ಪ್ರತ್ಯುತ್ತರ ನೀಡಿವೆ.

ಪೂಂಛ್‌ ಜಿಲ್ಲೆಯಲ್ಲಿ ಗುರುವಾರವೂ ಪಾಕ್‌ ಪಡೆಗಳು ದಾಳಿ ನಡೆಸಿದ್ದವು. ಪಾಕಿಸ್ತಾನದ ಏಳು ಸೇನಾ ನೆಲೆಗಳನ್ನು ಭಾರತ ಧ್ವಂಸ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.