ADVERTISEMENT

ಕುಲಭೂಷಣ್‌ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿದ ಪಾಕಿಸ್ತಾನ: ಐಸಿಜೆ

ಭದ್ರತಾ ಮಂಡಳಿಗೆ ಅಂತರರಾಷ್ಟ್ರೀಯ ನ್ಯಾಯಾಲಯದ ವರದಿ

ಪಿಟಿಐ
Published 31 ಅಕ್ಟೋಬರ್ 2019, 19:36 IST
Last Updated 31 ಅಕ್ಟೋಬರ್ 2019, 19:36 IST
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್   

ವಿಶ್ವಸಂಸ್ಥೆ: ಬೇಹುಗಾರಿಕೆ ಆರೋಪದಲ್ಲಿ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಅವರ ಬಂಧನ ಮತ್ತು ಸೆರೆವಾಸದ ವೇಳೆ ಪಾಕಿಸ್ತಾನವು ವಿಯೆನ್ನಾ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ) ವಿಶ್ವಸಂಸ್ಥೆಗೆ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಜೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಈ ಅಂಶವಿದೆ. ಜಾಧವ್‌ಗೆ ಘೋಷಿಸಲಾಗಿದ್ದ ಗಲ್ಲುಶಿಕ್ಷೆ ಜಾರಿಗೆ ಈ ಕಾರಣದಿಂದಲೇ ತಡೆ ನೀಡಲಾಯಿತು ಎಂದು ಐಸಿಜೆ ಹೇಳಿದೆ.

‘ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲಾಗುವ ಯಾವುದೇ ವ್ಯಕ್ತಿಗೆ, ಆತನ ದೇಶದೊಂದಿಗೆ ರಾಜತಾಂತ್ರಿಕ ಭೇಟಿಯನ್ನು ನಿರಾಕರಿಸುವಂತಿಲ್ಲಎಂದು ವಿಯೆನ್ನಾ ಒಪ್ಪಂದದಲ್ಲಿ ಹೇಳಲಾಗಿದೆ. ಜಾಧವ್ ಅವರ ಪ್ರಕರಣ
ದಲ್ಲಿ ವಿಯೆನ್ನಾ ಒಪ್ಪಂದವು ಪೂರ್ಣ ಪ್ರಮಾಣದಲ್ಲಿ ಅನ್ವಯವಾಗುತ್ತದೆ. ಆದರೆ ಈ ಒಪ್ಪಂದದ ನಿಯಮಗಳನ್ನು ಪಾಕಿಸ್ತಾನವು ಉಲ್ಲಂಘಿಸಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಬೇಹುಗಾರಿಕೆ ಆರೋಪದಲ್ಲಿ ವಿದೇಶಿಯರನ್ನು ಬಂಧಿಸಿದ ನಂತರ, ಯಾವುದೇ ವಿಳಂಬವಿಲ್ಲದಂತೆ
ಆ ವಿಚಾರವನ್ನು ಆತನ ದೇಶಕ್ಕೆತಿಳಿಸಬೇಕು ಎಂದು ವಿಯೆನ್ನಾ ಒಪ್ಪಂದದ 36ನೇ ವಿಧಿ ಹೇಳುತ್ತದೆ. ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದ ಮೂರು ವಾರಗಳ ನಂತರ ಪಾಕಿಸ್ತಾನವು ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ಮೂಲಕ ವಿಯೆನ್ನಾ ಒಪ್ಪಂದದ 36ನೇ ವಿಧಿಯನ್ನೂ ಪಾಕಿಸ್ತಾನ ಉಲ್ಲಂಘಿಸಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪಾಕಿಸ್ತಾನವು ಹಲವು ನಿಯಮಗಳನ್ನು ಉಲ್ಲಂಘಿಸಿ ರುವ ಕಾರಣ, ಪ್ರಕರಣ ಮತ್ತು ಜಾಧವ್ ಅವರಿಗೆ ಘೋಷಿಸಲಾದ ಶಿಕ್ಷೆಯ ಮರುಪರಿಶೀಲನೆ, ಮರುಪರಿಗಣನೆ ಅತ್ಯಗತ್ಯ
ಅಂತರರಾಷ್ಟ್ರೀಯ ನ್ಯಾಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.