ADVERTISEMENT

ಚಂಡೀಗಢದಲ್ಲಿ ಮೊಳಗಿದ ಸೈರನ್; ಮನೆಯಿಂದ ಹೊರಬರದಂತೆ ಜನರಿಗೆ ಸೂಚನೆ

ಪಿಟಿಐ
Published 9 ಮೇ 2025, 4:53 IST
Last Updated 9 ಮೇ 2025, 4:53 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಂಡೀಗಢ: ಜನತೆಗೆ ಮನೆಯೊಳಗೇ ಇರುವಂತೆ ಸೂಚಿಸಲು ಚಂಡೀಗಢದಲ್ಲಿ ಅಧಿಕಾರಿಗಳು ಶುಕ್ರವಾರ ಏರ್‌ ಸೈರನ್‌ ಮೊಳಗಿಸಿದ್ದಾರೆ.

‘ಪಾಕಿಸ್ತಾನ ಸೇನೆ ದಾಳಿ ಮಾಡುವ ಮುನ್ಸೂಚನೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ವಾಯು ಸೇನೆಯ ಸೂಚನೆಯಂತೆ ಸೈರನ್‌ ಮೊಳಗಿಸಲಾಗಿದೆ. ಜನರು ರಸ್ತೆಗಳಲ್ಲಿ ಓಡಾಡದಂತೆ, ಬಾಲ್ಕನಿಗಳಲ್ಲೂ ಕಾಣಿಸಿಕೊಳ್ಳದಂತೆ ಸೂಚಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ADVERTISEMENT

ಗುರುವಾರ ರಾತ್ರಿ ಪಾಕಿಸ್ತಾನ ಪಂಜಾಬ್‌, ಚಂಡೀಗಢದ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಡ್ರೋನ್, ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಸೇನೆ ಪಾಕಿಸ್ತಾನದ ಕ್ಷಿಪಣಿ, ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು

ಪಂಜಾಬ್‌ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗಡಿ ಪ್ರದೇಶದಲ್ಲಿರುವ ಮೊಹಾಲಿಯಲ್ಲೂ ಜನತೆಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.