ADVERTISEMENT

ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ತಡೆಹಿಡಿದ ಕೇಂದ್ರ ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2022, 6:36 IST
Last Updated 1 ಅಕ್ಟೋಬರ್ 2022, 6:36 IST
   

ನವದೆಹಲಿ: ಪಾಕಿಸ್ತಾನ ಸರ್ಕಾರದ ಅಧಿಕೃತ @GovtofPakistan ಟ್ವಿಟರ್ ಖಾತೆಯನ್ನು ಕೇಂದ್ರ ಸರ್ಕಾರ ಭಾರತದಲ್ಲಿ ತಡೆಹಿಡಿದಿದೆ.

ಭಾರತದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಬಿತ್ತುತ್ತಿದ್ದ ಆರೋಪದ ಮೇಲೆ ಕಾನೂನುಕ್ರಮದ ಭಾಗವಾಗಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ.

ಖಾತೆಯನ್ನು ತಡೆಹಿಡಿದಿರುವುದರಿಂದ ಭಾರತದಲ್ಲಿ ಟ್ವಿಟರ್ ಬಳಕೆದಾರರು ಪಾಕಿಸ್ತಾನದ ಟ್ವೀಟರ್ ಅಕೌಂಟ್‌ನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ADVERTISEMENT

ಈ ಹಿಂದೆ ಜೂನ್‌ನಲ್ಲಿ ಕೂಡ ಇದೇ ರೀತಿ ಭಾರತ ಸರ್ಕಾರ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ತಡೆಹಿಡಿದಿತ್ತು. ತಕ್ಷಣವೇ ಅದನ್ನು ಮತ್ತೆ ತೆಗೆದುಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.